ಹರಪನಹಳ್ಳಿಯ ಎಪಿಎಂಸಿ ಕಚೇರಿ ಬಣ ಬಣ !

ಹರಪನಹಳ್ಳಿ, ಸೆ. 2- ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಯಲ್ಲಿ ಸರ್ಕಾರ ಖಾಯಂಗೊಳಿಸಿದ ಸಿಬ್ಬಂದಿಗಳು ಒಬ್ಬರೂ ಇಲ್ಲದೆ ಕೆಲಸದ ಅವಧಿಯಲ್ಲಿ ಕಚೇರಿ ಬಣಗುಡುತ್ತಿದ್ದ ಪ್ರಸಂಗ ಬೆಳಕಿಗೆ ಬಂದಿದೆ.

ಪಟ್ಟಣದ ಕೊಟ್ಟೂರು ರಸ್ತೆಗೆ ಹೊಂದಿಕೊಂಡಿ ರುವ ಕೃಷಿ ಉತ್ಪನ್ನ ಮಾರುಕಟ್ಟೆಯು 1997ರಲ್ಲಿ ಉಪ ಮಾರುಕಟ್ಟೆ ದರ್ಜೆಯಿಂದ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿತು, ಈ ಮಾರುಕಟ್ಟೆ ಸಮಿತಿಯು 13 ಚುನಾಯಿತ ಹಾಗೂ 3 ಜನ ನಾಮನಿರ್ದೇಶನಗೊಂಡ ಒಟ್ಟು 16 ಜನ ನಿರ್ದೇಶಕರನ್ನು ಒಳಗೊಂಡ ಬೃಹತ್ ಕೃಷಿ ಉತ್ಪನ್ನ ಮಾರುಕಟ್ಟೆಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಇಲ್ಲಿ ಕೇವಲ 3 ಜನ ಸರ್ಕಾರದಿಂದ ನೇಮಕಗೊಂಡ ಸಿಬ್ಬಂದಿಯನ್ನು ಹೊಂದಿರುತ್ತದೆ. ಇದರ ಪೈಕಿ ಸರ್ಕಾರದ ನಿಯಮಗಳ ಪ್ರಕಾರ ಶೇ. 50ರಷ್ಟು ಸಿಬ್ಬಂದಿಯು ಕಚೇರಿಯಲ್ಲಿ ಹಾಜರಿರುವುದು ಕಡ್ಡಾಯವಾಗಿರುತ್ತದೆ.

ಅಂದರೆ ಒಂದೇ ದಿನ ಮೂವರು ಸಿಬ್ಬಂದಿಯ ಪೈಕಿ ಒಬ್ಬ ನೌಕರರಿಗೆ ಮಾತ್ರ ರಜೆ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಇನ್ನು ಉಳಿದ ಇಬ್ಬರು ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿರಬೇಕಾಗುತ್ತದೆ. ಈ ನಿಯ ಮಗಳನ್ನು ಗಾಳಿಗೆ ತೂರಿ ಒಬ್ಬ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗದೆ ಗೈರು ಹಾಜರಾಗಿ ಬೇಜವಾಬ್ದಾರಿತನವನ್ನು ಮೆರೆದಿದ್ದಾರೆ. ಉಳಿದ ಸಿಬ್ಬಂದಿಯು ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಪೈಕಿ ಕಾವಲುಗಾರ ಹುದ್ದೆಗೆ ನೇಮಕಗೊಂಡ ಪಕ್ಕೀರಪ್ಪ ಎಂಬ ವ್ಯಕ್ತಿ ಮಾತ್ರ ಹಾಜರಿದ್ದು, ಸಮಸ್ಯೆಯನ್ನು ಹೊತ್ತ ಬಂದ ರೈತರಿಗೆ ಸರಿಯಾದ ಮಾಹಿತಿ ನೀಡ ಬಲ್ಲನೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ವರದಿಗಾರನಾಗಿ ರೈತರ ದೂರಿನನ್ವಯ ಮಾಹಿತಿ ಕೇಳಲು ಹೋದ ಸಂದರ್ಭದಲ್ಲಿ ಕಚೇರಿ ಯ ಕುರ್ಚಿಗಳು ಖಾಲಿ ಇರುವುದನ್ನು ಕಂಡು ಸಿಬ್ಬಂ ದಿಗಳಲ್ಲಿದ ಕಚೇರಿಯನ್ನು ನೋಡಿ ಸಿಬ್ಬಂದಿಗಳ ಬಗ್ಗೆ ವಿಚಾರಿಸಿದಾಗ ಕಾವಲುಗಾರನು ಕಾರ್ಯದರ್ಶಿ ಯವರ ದೂರವಾಣಿ ಸಂಖ್ಯೆಯನ್ನು ನೀಡಿದನು.

ತಕ್ಷಣವೇ ಕಾರ್ಯದರ್ಶಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ನಾನು ವೈಯಕ್ತಿಕ ಕೆಲಸ ನಿಮಿತ್ತವಾಗಿ ರಜೆ ಹಾಕಿರುತ್ತೇನೆ. ಉಳಿದ ಸಿಬ್ಬಂದಿಯು ಅವರವರ ಕೆಲಸ ನಿಮಿತ್ತ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ನೀವು ಮೊದಲೇ ಬರುವುದಾಗಿ ತಿಳಿಸಿದ್ದರೆ ನಾನೇ ಬರುತ್ತಿದ್ದೆ ಎಂಬ ಉಡಾಫೆ ಉತ್ತರ ನೀಡಿ ನಯವಾಗಿ ಜಾರಿಕೊಂಡು ಕಾರ್ಯದರ್ಶಿ ಎ.ಜಿ. ವೀರಣ್ಣ.

ಹೀಗಾದರೆ ರೈತರ ಪಾಡೇನು? ಇವರಿಗೆ ಸರ್ಕಾರ ಸಂಭಾವನೆ ನೀಡುತ್ತಿರುವುದು ಜನರ ಅಹ ವಾಲುಗಳನ್ನು ಬಗೆಹರಿಸಲೋ ಅಥವಾ ರಜೆ ಹಾಕಿ ಮಜಾ ಮಾಡಲೋ ಎಂಬುದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.

ಈ ವೇಳೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಡಿ. ಜಂಬಣ್ಣ ಚಿಗಟೇರಿ ಮಾತನಾಡಿ, ಸರ್ಕಾರದ ನಿಯಮಾವಳಿ ಪ್ರಕಾರ ಮೂವರು ಸಿಬ್ಬಂದಗಿಳ ಪೈಕಿ ಇಬ್ಬರು ಸಿಬ್ಬಂದಿಗಳಾದರೂ ಹಾಜರಿರಬೇಕು. ನಾನು ಒಬ್ಬ ಸದಸ್ಯನಾಗಿ ರೈತರು ಅಹವಾಲುಗಳನ್ನು ಹೇಳಲು ಬಂದರೆ ಕಚೇರಿಯಲ್ಲಿ ಖಾಲಿ ಕುರ್ಚಿಗಳನ್ನು ಕಂಡು ದಿಗ್ಭ್ರಮೆಗೊಂಡೆ. ಪದೇ ಪದೇ ಈ ರೀತಿ ಆಗುತ್ತಿರುವುದನ್ನು ಅಧ್ಯಕ್ಷರ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗಿಲ್ಲ. ಇದನ್ನು ಮೇಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕಿದೆ ಎಂದರು.

error: Content is protected !!