ಹರಿಹರ, ಆ. 27- ಕೊರೊನಾ ಶಬ್ದ ಕೇಳಿ ದರೆ ಜನ ಸಾಮಾನ್ಯರ ಎದೆ ಝಲ್ ಎನ್ನುತ್ತದೆ. ಜನರನ್ನು ಬಿಟ್ಟು ಬಿಡಿ. ಹಲವು ವೈದ್ಯರು ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಕೆಲವು ವೈದ್ಯರು ರಾಜೀನಾಮೆ ನೀಡಿದ್ದಾರೆ.
ಇಂತಹ ಸೂಕ್ಷ್ಮ ಸಮಯದಲ್ಲೂ ಜೀವದ ಹಂಗು ತೊರೆದು ಸೇವೆ ಸಲ್ಲಿಸುವ ವೈದ್ಯರು ಹಲ ವರಿದ್ದಾರೆ. ಇಂತಹವರ ಪೈಕಿ ಹರಿಹರದ ಗುತ್ತೂ ರಿನ ಕೋವಿಡ್ ಕೇರ್ ಸೆಂಟರ್‍ನ ಮುಖ್ಯಸ್ಥ ಡಾ.ವಿಶ್ವನಾಥ್ ಕುಂದಗೋಳ್‍ಮಠ ಒಬ್ಬರು.
ಜುಲೈ 13ರಿಂದ ಈ ಕೇಂದ್ರ ಆರಂಭವಾ ಗಿದ್ದು, ಆಗಿನಿಂದಲೇ ಇವರು ಅಲ್ಲಿ ಸೇವೆ ಸಲ್ಲಿ ಸುತ್ತಿದ್ದಾರೆ. ಈ ಕೇಂದ್ರದಲ್ಲಿ 130 ಜನರು ರೋಗಿ ಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಇಲ್ಲಿಗೆ ಬರುವ ರೋಗಿಗಳು ಬಹುತೇಕ ಚಿಹ್ನೆ ರಹಿತರು.
ಡಾ.ವಿಶ್ವನಾಥ್ ಅವರು ಕೇಂದ್ರಕ್ಕೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಮೊದಲು ಕೆಲವು ನಿಮಿಷಗಳವರೆಗೆ ಕೌನ್ಸೆಲಿಂಗ್ ಮಾಡುತ್ತಾರೆ. ಕೊರೊನಾ ಕಾಯಿಲೆ ಎಂದರೆ ಏನು? ಅದನ್ನು ಹೇಗೆ ನಿವಾರಿಸಿಕೊಳ್ಳಬೇಕು? ಕೈಗೊಳ್ಳಬೇಕಾದ ಎಚ್ಚರಿಕೆಗಳೇನು? ಎಂಬುದನ್ನು ವಿವರಿಸಿ ರೋಗಿಗಳಿಗೆ ಮನೋಬಲವನ್ನು ಹೆಚ್ಚಿಸುತ್ತಾರೆ.
ನಮ್ಮ ಕೇಂದ್ರದಲ್ಲಿ ಈವರೆಗೆ 263 ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕನಿಷ್ಠ 10 ದಿನ ಚಿಕಿತ್ಸೆ ನೀಡುತ್ತೇವೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಕೀಯ ಅಧಿಕಾರಿಯಾಗಿ 7 ವರ್ಷಗಳಿಂದ ಕೆಲಸ ನಿರ್ವಹಿಸಿದ ಅನುಭವ ಕೋವಿಡ್ ಕೇರ್ ಸೆಂಟರ್ ನಿರ್ವಹಣೆಯಲ್ಲಿ ಸಹಾಯ ಮಾಡಿತು. ರೋಗಿಗಳನ್ನು ನಮ್ಮ ಕುಟುಂಬದ ಸದಸ್ಯರಂತೆ ಕಾಳಜಿ ವಹಿಸುವುದೇ ರೋಗಿಯಲ್ಲಿ ರೋಗದ ಪ್ರಮಾಣವನ್ನು ಶೇ.50 ರಷ್ಟು ತಗ್ಗಿಸುತ್ತದೆ.
– ಡಾ. ವಿಶ್ವನಾಥ ಕುಂದಗೋಳಮಠ, ಗುತ್ತೂರು ಕೋವಿಡ್ ಸೆಂಟರ್ ಮುಖ್ಯಸ್ಥರು.
ನಾನು ಪಾಸಿಟಿವ್ ಎಂದು ತಿಳಿದ ಮೊದಲ ದಿನ ಗುತ್ತೂರು ಕೋವಿಡ್ ಸೆಂಟರ್ಗೆ ಹೋದಾಗ ತುಂಬಾ ಭಯಪಟ್ಟಿದ್ದೆ. ಡಾ.ವಿಶ್ವನಾಥರ ಪ್ರೀತಿ ಹಾಗೂ ವಿಶ್ವಾಸದ ಮಾತುಗಳು ನನ್ನ ಭಯವನ್ನು ದೂರಗೊಳಿಸಿದವು. 10 ದಿನಗಳ ಚಿಕಿತ್ಸೆ ಹಾಗೂ ಒಂದು ವಾರ ಕಾಲದ ಮನೆಯಲ್ಲೇ ಐಸೋಲೇಷನ್ನ ನಂತರ ನಾನು ಸಹಜವಾಗಿದ್ದೇನೆ.
– ಮಂಜುನಾಥ್, ಕೋವಿಡ್ ಗುಣಮುಖ ರೋಗಿ, ಹರಿಹರ.
ರೋಗಿಗಳ ಸ್ಥಿತಿಗತಿಯನ್ನಾಧರಿಸಿ ಅವರಿಗೆ ಚಿಕಿತ್ಸೆ ನೀಡಲು ಆರಂಭಿಸುತ್ತಾರೆ. ರೋಗಿ ಹತ್ತು ಮಾತಾನಾಡಿದರೆ ವೈದ್ಯರು ಒಂದು ಮಾತನಾಡುವುದು ಕಷ್ಟ. ಆದರೆ ಡಾ.ವಿಶ್ವನಾಥ್ ರೋಗಿಯ ಜೊತೆಗೆ ಹೆಚ್ಚು ಮಾತನಾಡುತ್ತಾರೆ.
ಸರ್ಕಾರದಿಂದ ಕೊಡ ಮಾಡುವ ಸೀಮಿತ ಸೌಲಭ್ಯಗಳಲ್ಲೇ ರೋಗಿಗಳ ಅಗತ್ಯಗಳನ್ನು ಪೂರೈಸಲು ಇವರು ಶ್ರಮಿಸುತ್ತಿದ್ದಾರೆ. ಆಗಾಗ್ಗೆ ರೋಗಿಗಳ ಬಿ.ಪಿ., ಇಸಿಜಿ ತಪಾಸಣೆ ಮಾಡಿಸುತ್ತಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅವರಿಗೆ ಹರಿಹರ ಅಥವಾ ದಾವಣಗೆರೆ ಕೋವಿಡ್ ಆಸ್ಪತ್ರೆಗೆ ಸಾಗಿಸುತ್ತಾರೆ.
ತಜ್ಞರೊಬ್ಬರು ಹೇಳಿದಂತೆ, ವೈದ್ಯರು ರೋಗಿಯ ಜೊತೆಗೆ ಚರ್ಚೆ ಮಾಡಬೇಕು. ಹಲವು ಸಂದರ್ಭಗಳಲ್ಲಿ ರೋಗಿಗೆ ಔಷಧಿ ಕೊಡುವ ಅಗತ್ಯವೇ ಇರುವುದಿಲ್ಲ. ಉತ್ತಮವಾದ ಕೌನ್ಸೆಲಿಂಗ್ ಮಾಡಿದರೆ ಸಾಕಾಗುತ್ತದೆ. ಆ ತಜ್ಞರ ಹೇಳಿಕೆ ಡಾ.ವಿಶ್ವನಾಥರಿಗೆ ಹೆಚ್ಚು ಅನ್ವಯವಾಗುತ್ತದೆ.
ಖಾಸಗಿ ಆಸ್ಪತ್ರೆಗಳಲ್ಲೂ ಸಿಗದ ಸೇವೆ ಈ ಸರ್ಕಾರಿ ಕೋವಿಡ್ ಸೆಂಟರ್‍ನಲ್ಲಿ ಸಿಗುತ್ತಿದೆ. ಒಟ್ಟಾರೆ ಇಲ್ಲಿನ ರೋಗಿಗಳು ಉತ್ತಮ ವೈದ್ಯರ ಚಿಕಿತ್ಸೆ ಹಾಗೂ ಪ್ರೀತಿಯಿಂದ ಥ್ರಿಲ್ ಆಗಿದ್ದಾರೆ. ಖಾಯಿಲೆ ಕೋವಿಡ್ ಪಾಸಿಟಿವ್ ಎಂದು ಸೋತವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ.
ಇಂತಹ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಇಂತಹ ಕೋವಿಡ್ ದುಸ್ಥಿತಿಯಲ್ಲಿ ರೋಗಿಗಳು ಹಾಗೂ ಅವರ ಕುಟುಂಬದವರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸುತ್ತದೆ.