ಕೂಡ್ಲಿಗಿ : ಗೋವಿಂದಗಿರಿ ತಾಂಡಾದ ರಸ್ತೆ ಅಭಿವೃದ್ಧಿಗೆ ಹಣ ಮಂಜೂರು ಮಾಡಿದ ಸಂಸದ ದೇವೇಂದ್ರಪ್ಪ

ಕೂಡ್ಲಿಗಿ, ಅ.27- ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೋವಿಂದಗಿರಿ ತಾಂಡಾದಲ್ಲಿ ರುವ ಗುಳೆಲಕ್ಕಮ್ಮ ದೇವಸ್ಥಾನಕ್ಕೆ ಬಂದು, ಹೋಗಲು ಸಿ. ಸಿ. ರಸ್ತೆ ನಿರ್ಮಿಸಿ ಕೊಡುವಂತೆ ಸಂಸದ ದೇವೇಂದ್ರಪ್ಪ ಅವರಿಗೆ ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಸ್ಪಂದಿಸಿದ  ಸಂಸದರು, 22 ಲಕ್ಷ ರೂ. ಬಿಡುಗಡೆ ಗೊಳಿಸಿದ್ದು ಗ್ರಾಮಸ್ಥರಲ್ಲಿ ಹರ್ಷ ತಂದಿದ್ದು, ಸಂಸದರನ್ನು ಅಭಿನಂದಿಸಿದ್ದಾರೆ.

10ನೇ ವಾರ್ಡಿನಲ್ಲಿ ಗುಳೇಲಕ್ಕಮ್ಮ ದೇವಿ ದೇವಸ್ಥಾನ ಇದ್ದು, ಅದರ ಪಾದಗಟ್ಟೆ ದೇವಸ್ಥಾನ  ಗೋವಿಂದಗಿರಿ ತಾಂಡಾ ಸಮೀಪವಿದೆ. 2 ವರ್ಷ ಕ್ಕೊಮ್ಮೆ  ಗುಳೇ ಹೋಗುವ ಜಾತ್ರೆ ನಡೆಯುತ್ತಿದ್ದು, ಈ ದೇವಸ್ಥಾನ ರಸ್ತೆ ಅಭಿವೃದ್ಧಿಗೆ ಸ್ಪಂದಿಸುವಂತೆ ಕಳೆದೆರಡು ತಿಂಗಳ ಹಿಂದೆ ಅರಸಿಕೇರಿ ಗ್ರಾಮದ ಸಂಸದರ ಮನೆಗೆ ಗೋವಿಂದಗಿರಿ ತಾಂಡಾದ  ಪಟ್ಟಣ ಪಂಚಾಯತಿ ಸದಸ್ಯ ಬಾಸುನಾಯ್ಕ್,  ಮುಖಂಡರಾದ ಗೋವಿಂದನಾಯ್ಕ್, ಈಶ್ವರ ನಾಯ್ಕ್, ದೇವೇಂದ್ರನಾಯ್ಕ್ ಮನವಿ ಸಲ್ಲಿಸಿದ್ದರು. 

ಕಳೆದ ಮೂರ್ನಾಲಕ್ಕು ದಿನದ ಹಿಂದಷ್ಟೇ ಕೂಡ್ಲಿಗಿ ಜಿಲ್ಲಾ ಪಂ ಚಾಯತಿ ಇಂಜಿನಿಯರಿಂಗ್ ಕಚೇರಿ ಅಭಿಯಂ ತರರು ಭೇಟಿ ನೀಡಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ್ದರು.

ಮಲ್ಲಕ್ಕನಕಟ್ಟೆ ಕಾಲುವೆ ಬ್ರಿಡ್ಜ್, ರಸ್ತೆ ನಿರ್ಮಾಣಕ್ಕೆ ಮನವಿ : ದೇವಸ್ಥಾನದ ಸುತ್ತಮುತ್ತ ಸೇರಿದಂತೆ ಮಲ್ಲಕ್ಕನಕಟ್ಟೆಗೆ ಹರಿಯುವ ರಾಜ ಕಾಲುವೆವರೆಗೆ ಸಂಸದರ ನಿಧಿ ಹಣ ಉಪಯೋಗವಾಗಿದ್ದು, ರಾಜಕಾಲುವೆಗೆ ಒಂದು ಬ್ರಿಡ್ಜ್ ವ್ಯವಸ್ಥೆ ಕಲ್ಪಿಸಿದಲ್ಲಿ ನಂತರ  ದೇವಸ್ಥಾನದ ರಸ್ತೆ ಕೂಡ್ಲಿಗಿವರೆಗೆ ಅಭಿವೃದ್ಧಿ ಪಡಿಸಿದಲ್ಲಿ ಗ್ರಾಮದ ಜನತೆ ಪಟ್ಟಣಕ್ಕೆ ಬಂದು ಹೋಗಲು  ಅನುಕೂಲವಾಗಲಿದೆ. ಈ ಬ್ರಿಡ್ಜ್ ಹಾಗೂ ರಸ್ತೆಯನ್ನು ಶಾಸಕರ ಅನುದಾನದಲ್ಲಾಗಲೀ ಅಥವಾ ಪಟ್ಟಣ ಪಂಚಾಯತಿ ಅನುದಾನದಲ್ಲಾ ಗಲೀ ಮಾಡಿಕೊಡುವಂತೆ ಗೋವಿಂದಗಿರಿ ತಾಂಡಾದ ಗ್ರಾಮಸ್ಥರು ಮನವಿ ಮಾಡಿದ್ದಾರೆ.

error: Content is protected !!