ನ್ಯಾಮತಿ, ಜೂ.30- ತಾಲ್ಲೂಕು ಪಂಚಾಯತ್ ಅಧ್ಯಕ್ಷರಾಗಿ ನ್ಯಾಮತಿ ಕ್ಷೇತ್ರದ ಎಸ್.ಪಿ. ರವಿಕುಮಾರ್, ಉಪಾಧ್ಯಕ್ಷರಾಗಿ ಬೆಳಗುತ್ತಿ ಕ್ಷೇತ್ರದ ಡಿ. ಮರಿಕನ್ನಪ್ಪ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಧಿಕಾರಿ ಮಮತಾ ಹೊಸಗೌಡರ್ ತಿಳಿಸಿದ್ದಾರೆ.
11 ಸ್ಥಾನದ ಬಲ ಹೊಂದಿರುವ ನೂತನ ತಾಲ್ಲೂಕು ಪಂಚಾಯತ್ನಲ್ಲಿ ಬಿಜೆಪಿ 7, ಕಾಂಗ್ರೆಸ್ 3, ಪಕ್ಷೇತರ 1 ಸ್ಥಾನವನ್ನು ಹೊಂದಿದೆ. ತಾಲ್ಲೂಕು ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ 7 ಸದಸ್ಯರು ಕಾಂಗ್ರೆಸ್ನ 2 ಸದಸ್ಯರು ಭಾಗವಹಿಸಿದ್ದರು.
ನ್ಯಾಮತಿ ತಹಶೀಲ್ದಾರ್ ತನುಜಾ ಟಿ. ಸವದತ್ತಿ, ಉಪತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ, ಪ್ರಭಾರ ಇಒ ಜಿ.ಎಸ್.ಅಜ್ಜಪ್ಪ, ನ್ಯಾಮತಿ ಗ್ರಾಮ ಪಂಚಾಯತ್ ಪಿಡಿಒ ಮೆಹಬೂಬ್ ಮತ್ತಿತರರು ಭಾಗವಹಿಸಿದ್ದರು.