ಹರಪನಹಳ್ಳಿ ತಾ.ನಲ್ಲಿ ಮಳೆಯ ಅಬ್ಬರಕ್ಕೆ ನೆಲಕ್ಕುರುಳಿದ ಮರ : ಮೇಲ್ಛಾವಣಿ ಕುಸಿತ

ಹರಪನಹಳ್ಳಿ, ಮೇ 6- ಗುಡುಗು, ಬಿರುಗಾಳಿ ಸಹಿತ ಸುರಿದ ಮಳೆಯ ಅಬ್ಬರಕ್ಕೆ ಮರಗಳು ನೆಲಕ್ಕುರುಳಿವೆ. ಮನೆಯ ಮೇಲ್ಛಾವಣಿಗಳು ಹಾರಿ ಹೋದ ಪರಿಣಾಮ ಅಪಾರ ನಷ್ಟವಾಗಿದೆ.

ಅರಸಿಕೇರಿ ಹೋಬಳಿಯ ಹಳ್ಳಿಕೇರಿ ಗ್ರಾಮದಲ್ಲಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ ನೆಲಸಮ ವಾಗಿದೆ. ಹೊಸಹಳ್ಳಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು, ತಗಡಿನ ಶೀಟ್‍ಗಳು ಹಾರಿ
ಹೋಗಲಿವೆ. ತೆಲಿಗಿ ಹೋಬಳಿಯ ಶಿವಪುರ ಗ್ರಾಮದಲ್ಲಿ ವಾಸಿಸುತ್ತಿರುವ ಮನೆ, ಭಾಗಶಃ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. 

ನೀಲಗುಂದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಿಂಚು, ಗುಡುಗು, ಬಿರುಗಾಳಿ ಸಹಿತ ಮಳೆ ಜೋರಾಗಿ ಸುರಿದಿದ್ದು, ಗುಡುಗು ಸಿಡಿಲಿಗೆ ತಾಲ್ಲೂಕಿನಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. 

ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಹೊಡೆದು ಬೆಂಕಿ ಕಾಣಿಸಿಕೊಂಡ ದೃಶ್ಯ ಜನರನ್ನು ಭಯಗೊಳಿಸಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹರಪನಹಳ್ಳಿಯಲ್ಲಿ 16.4 ಎಂ.ಎಂ., ಅರಸಿಕೇರಿ ಯಲ್ಲಿ 3.2 ಎಂ.ಎಂ., ಉಚ್ಚಂಗಿದುರ್ಗದಲ್ಲಿ 54.4 ಎಂ.ಎಂ., ಹಿರೇಮೇಗಳಗೇರಿಯಲ್ಲಿ 14.2 ಎಂ.ಎಂ., ಚಿಗಟೇರಿಯಲ್ಲಿ 26.6 ಎಂ.ಎಂ., ತೆಲಿಗಿಯಲ್ಲಿ 36.2 ಎಂ.ಎಂ., ಹಲುವಾಗಿಲಿನಲ್ಲಿ 9.2 ಎಂ.ಎಂ., ಒಟ್ಟು 160.2 ಎಂ.ಎಂ ಮಳೆಯಾಗಿದೆ, ಸರಾಸರಿ ತಾಲ್ಲೂಕಿ ನಲ್ಲಿ 22.8 ಮಿಲಿ ಮೀಟರ್  ಮಳೆಯಾ ಗಿರುವ ವರದಿ ಯಾಗಿದೆ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ. ಮುಂಗಾರು ಮಳೆ ಜನರಲ್ಲಿ ನಿರೀಕ್ಷೆ ಮೂಡಿಸಿದ್ದು, ತಾಲ್ಲೂಕಿನ ಹೋಬಳಿ ಗಳ ರೈತರಲ್ಲಿ ಖುಷಿ ತಂದಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

error: Content is protected !!