ತಿಂಗಳ ಅಂಗಳದಲ್ಲಿ ಹಿರಿಯ ಸಾಹಿತಿ ಡಾ. ಎಂ.ಜಿ. ಈಶ್ವರಪ್ಪ
ದಾವಣಗೆರೆ, ಏ.18- ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯದ ಕೊಡುಗೆ ಅಪಾರ. ಹಾಗಾಗಿ ಹೊಸತನದ ಹುಟ್ಟಿಗೆ ಮತ್ತು ಸಾಮಾಜಿಕ ಸಂವರ್ಧನೆಗೆ ಆಗಾಗ್ಗೆ ಆರೋಗ್ಯಕರ ಸಾಹಿತ್ಯಿಕ ಚರ್ಚೆ ನಡೆಯುತ್ತಿರಬೇಕು ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ. ಎಂ.ಜಿ ಈಶ್ವರಪ್ಪ ಅಭಿಪ್ರಾಯಿಸಿದರು.
ತಿಂಗಳ ಅಂಗಳ ಸಾಹಿತ್ಯ – ಸಾಂಸ್ಕೃತಿಕ ಬಳಗದ ವತಿಯಿಂದ ನಗರದ ಕವಯತ್ರಿ ಚಂದ್ರಿಕಾ ಜಗನ್ನಾಥ್ ಅವರ ನಿವಾಸದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕವಿ ಕಾವ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯ ಸರ್ವರ ಹಿತವನ್ನು ಬಯಸುತ್ತದೆ. ಸರ್ವ ರಂಗಗಳ ಅಭಿವೃದ್ಧಿಯನ್ನು ಆಶಿಸುತ್ತದೆ. ಆ ದಿಸೆಯಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳ ಆಯೋಜನೆ ಮನುಕುಲದ ಮನಪರಿವರ್ತನೆಗೆ ಪುಷ್ಠಿ ನೀಡುತ್ತದೆ. ಸುಂದರ ವ್ಯಕ್ತಿತ್ವಗಳ ಉದಯಕ್ಕೆ ನಾಂದಿ ಹಾಡುತ್ತದೆ. ಇಂತಹ ಉತ್ಕೃಷ್ಟ ಆಶಯಕ್ಕೆ ಪೂರಕ ವಾಗಿ ತಿಂಗಳ ಅಂಗಳ ಬಳಗ ಶ್ರಮಿಸುತ್ತಿ ರುವುದು ಶ್ಲಾಘನೀಯ ಎಂದರು.
`ಕನ್ನಡದ ಮಹಿಳಾ ಸಾಹಿ ತಿಗಳು ಮತ್ತು ಸ್ತ್ರೀ ಸಂವೇದನೆ’ ವಿಷಯ ಕುರಿತು ಮಾತನಾ ಡಿದ ಲೇಖಕಿ ಹಾಗೂ ವಾಗ್ಮಿ ಸುಭಾಷಿಣಿ ಅವರು ಮಹಿಳಾ ಲೇಖಕಿಯರ ಸಾಹಿತ್ಯಿಕ ಒಳ ತೋಟಿಯನ್ನು ಸ್ವಾರಸ್ಯ ಕರವಾಗಿ ವಿವರಿಸಿದರು.
ಆಹ್ವಾನಿತ ಕವಿಮಿತ್ರ ರಾದ ರಾಜಶೇಖರ್ ಗುಂಡಗಟ್ಟಿ, ಮಹಾಂತೇಶ್ ಬಿ ನಿಟ್ಟೂರು, ಗಂಗಾಧರ ಬಿ.ಎಲ್ ನಿಟ್ಟೂರ್, ತಾರೇಶ್ ಅಣಬೇರು, ಪಾಪುಗುರು, ವೀರೇಶ್ ಬಿ.ಜಿ.ಎಂ, ಅಂಜಿನಪ್ಪ, ಕೊಟ್ರೇಶ್ ಎನ್.ಕೆ. ಪ್ರಭು ಗೊಲ್ಲರಹಳ್ಳಿ, ಪರಮೇಶ್ ನೆಲ್ಲಿಕಟ್ಟೆ, ಮಲ್ಲಮ್ಮ ನಾಗರಾಜ್, ಸಂಧ್ಯಾ ಸುರೇಶ್, ಸುಕನ್ಯಾ ತ್ಯಾವಣಗಿ, ಅನ್ನಪೂರ್ಣ ಪಾಟೀಲ್, ಡಾ. ಅನಿತಾ ದೊಡ್ಡಗೌಡರ್, ಬಿ.ಹೆಚ್. ಉಮಾ ಮಹೇಶ್ವರಿ, ಶೋಭಾ ಮಂಜುನಾಥ್, ಉಮಾದೇವಿ ಹಿರೇಮಠ ಅವರು ಕನ್ನಡ ನಾಡಿನ ಹಿರಿಯ ಪ್ರಸಿದ್ಧ ಕವಿಗಳ ಕವನ ವಾಚನ ಮಾಡಿದರು.