ದಾವಣಗೆರೆ, ಏ.16- ನರೇಗಾ ಯೋಜನೆಯಡಿ ಕೆಲಸ ಕೊಡದೇ ಇದ್ದು ದರಿಂದ ನಿರುದ್ಯೋಗ ಭತ್ಯೆಗಾಗಿ ಕೊಡಿಸು ವಂತೆ ಒತ್ತಾಯಿಸಿ ಜಗಳೂರು ತಾಲ್ಲೂಕು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ಪಂಚಾ ಯಿತಿ ಸಿಇಓಗೆ ಮನವಿ ಸಲ್ಲಿಸಲಾಯಿತು.
ನರೇಗಾ ಕಾರ್ಮಿಕರು ಅರ್ಜಿ ಸಲ್ಲಿಸಿ 6 ತಿಂಗಳಾದರೂ ನಿರುದ್ಯೋಗ ಭತ್ಯೆ ಕೊಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಿಇಒ ಬಳಿ ಸಂಘದ ಮುಖಂಡರು ತಿಳಿಸಿದರು.
ಜಗಳೂರು ತಾಲ್ಲೂಕು ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕುಜ್ಜಿನಿ ಗ್ರಾಮದ ನರೇಗಾ ಕಾರ್ಮಿಕರು ಈ ಹಿಂದೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ ಕೆಲಸ ಕೊಡದೆ ಇದ್ದಾಗ ನಿರು ದ್ಯೋಗ ಭತ್ಯೆಗಾಗಿ ಅರ್ಜಿ ಸಲ್ಲಿಸಿದ್ದರೂ ಇದುವ ರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ, ಕೆಲಸವನ್ನೂ ಕೊಡದೇ, ನಿರು ದ್ಯೋಗ ಭತ್ಯೆಯನ್ನು ನೀಡದೆ ಸತಾಯಿಸಲಾ ಗುತ್ತಿದೆ. ಆದ್ದರಿಂದ ಕೂಡಲೇ ಜಗಳೂರು ತಾ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಿ ಕೂಡಲೇ ನಿರುದ್ಯೋಗ ಭತ್ಯೆ ಬಿಡು ಗಡೆ ಮಾಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ನರೇಗಾ ರಂಗನಾಥ್, ತಾಲ್ಲೂಕು ಸಂಚಾಲಕ ಕ್ಯಾಸೇನಹಳ್ಳಿ ಕರಿಯಣ್ಣ ಇದ್ದರು.