ಎಎಸ್ಪಿಯಾಗಿ ರಾಮಗೊಂಡ ಬಸರಗಿ

ಎಎಸ್ಪಿಯಾಗಿ ರಾಮಗೊಂಡ ಬಸರಗಿ - Janathavaniದಾವಣ ಗೆರೆ, ಜ.12- ಜಿಲ್ಲಾ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ರಾಮಗೊಂಡ ಬಸರಗಿ ಇಂದು ಅಧಿಕಾರ ವಹಿಸಿಕೊಂಡರು.

1994ನೇ ಸಾಲಿನಲ್ಲಿ ಪಿಎಸ್ಐ ಆಗಿ ಇಲಾಖೆಗೆ ಸೇರಿದ್ದಾರೆ. ಡಿವೈಎಸ್ಪಿ ಆಗಿ ಸಿಐಡಿ ಬೆಂಗಳೂರು, ಯಾದಗಿರಿ, ಅಥಣಿಯಲ್ಲಿ ಸೇವೆ ಸಲ್ಲಿಸಿದ್ದು, ಡಿವೈಎಸ್ಪಿ ಹುದ್ದೆಯಿಂದ ಪದೋನ್ನತಿ ಹೊಂದಿ ಎಸ್ಪಿ ಎಸಿಬಿ, ಕೇಂದ್ರ ಕಛೇರಿ, ಹುಬ್ಬಳಿ-ಧಾರವಾಡ ಕಮಿಷನರೇಟ್ ನಲ್ಲಿ ಡಿಸಿಪಿ ಕ್ರೈಂ ಮತ್ತು ಟ್ರಾಫಿಕ್ ಆಗಿ ಸೇವೆ ಸಲ್ಲಿಸಿದ್ದಾರೆ. 

ಮೂಲತಃ ವಿಜಾಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಕೆರೂರು ಗ್ರಾಮದವರಾದ ರಾಮಗೊಂಡ ಬಸರಗಿ ಅವರು ದಾವಣಗೆರೆ ಜಿಲ್ಲೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಂಡಿದ್ದಾರೆ. 

ಡಿಸಿಆರ್ ಬಿ ಡಿವೈಎಸ್ಪಿ ಬಿ.ಎಸ್. ಬಸವರಾಜ್  ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಎಎಸ್ಪಿ ರಾಮಗೊಂಡ ಬಸರಗಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

error: Content is protected !!