ವಾಲ್ಮೀಕಿ ಗುರುಪೀಠದಲ್ಲಿನ ಪುಣ್ಯಾರಾಧನೆಯಲ್ಲಿ ಟಿ. ಓಬಳಪ್ಪ ಸ್ಮರಣೆ
ಮಲೇಬೆನ್ನೂರು. ಏ.3- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿರುವ ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಶ್ರೀಗಳವರ ಗದ್ದುಗೆಗೆ ಅವರ 15ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ ಮಾತನಾಡಿ, ಲಿಂಗೈಕ್ಯ ಶ್ರೀಗಳು ಕೇವಲ 9 ವರ್ಷಗಳಲ್ಲಿ 90 ವರ್ಷಗಳ ಸಾಧನೆ ಮಾಡಿಹೋಗಿದ್ದಾರೆ ಎಂದರು.
ಜಿ.ಪಂ. ಮಾಜಿ ಸದಸ್ಯ ಎ.ಹೆಚ್. ಕುಬೇರಪ್ಪ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ಶ್ರೀಮತಿ ಸುಮಿತ್ರ ಕೋಂ ದಿ. ಕೆ.ಹೆಚ್. ಓಬಳಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ, ಮಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್, ಹರಿಹರ ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಕೆ.ಆರ್. ರಂಗಪ್ಪ, ಹರಿಹರ ನಗರಸಭೆ ಸದಸ್ಯ ದಿನೇಶ್ಬಾಬು, ಮಹಿಳಾ ಮುಖಂಡರಾದ ಪಾರ್ವತಿ, ಶಿಕ್ಷಕರಾದ ಜಿ.ಆರ್. ನಾಗರಾಜ್, ವಾಸನದ ಮಹಾಂತೇಶ್, ರಾಜನಹಳ್ಳಿ ಭೀಮಣ್ಣ, ಬೆಣ್ಣೇರ ನಂದ್ಯೆಪ್ಪ, ಉಕ್ಕಡಗಾತ್ರಿ ಪ್ರಕಾಶ್, ಕನ್ನಡ ಶಿಕ್ಷಕ ಟಿ. ಶಶಿಧರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಸಭೆ : ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು ಭಾನುವಾರ 53ನೇ ದಿನಕ್ಕೆ ಕಾಲಿಟ್ಟಿತ್ತು.