ದಾವಣಗೆರೆ, ಮಾ.27- ನಗರದ ಹೊರವಲಯದಲ್ಲಿರುವ ಜಿನೆಸಿಸ್ ರಿಟ್ರೀಟ್ ಮಾರಾಟಕ್ಕಿದೆ ಎಂಬ ವದಂತಿ ಹಬ್ಬಿಸಿದ ವ್ಯಕ್ತಿಯ ವಿರುದ್ಧ ಮಾಲೀಕ ಜಿ.ಎಸ್. ಮಂಜುನಾಥ್ ಅವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡಾ. ಧನಂಜಯ ಎಂಬುವವರು ತಮ್ಮ ರಿಟ್ರೀಟ್ ಮಾರಾಟಕ್ಕಿದೆ ಎಂದು ವಾಟ್ಸಾಪ್ನಲ್ಲಿ 95 ಫೋಟೋಗಳೊಂದಿಗೆ ಹರಿಬಿಟ್ಟಿದ್ದಾರೆ. ನನ್ನ ಸ್ನೇಹಿತರೊಬ್ಬರು ದೂರವಾಣಿ ಕರೆ ಮಾಡಿ ತಿಳಿಸಿದಾಗಲೇ ಈ ವಿಷಯ ನನಗೆ ತಿಳಿಯಿತು ಎಂದವರು ಹೇಳಿದ್ದಾರೆ.
April 2, 2025