ದಾವಣಗೆರೆ, ಮಾ. 21 – ನಗರದ ರೈಲ್ವೆ ಹಳಿಯ ಹತ್ತಿರ ಸುಮಾರು 70 ವರ್ಷದ ಅಪರಿಚಿತ ವೃದ್ಧ ಸಾವಿಗೀಡಾಗಿದ್ದಾನೆ. ಸಾಧಾರಣ ಮೈಕಟ್ಟು ಹೊಂದಿದ್ದು, ಕೋಲು ಮುಖ, ಹಣೆಯ ಮೇಲೆ ಕೂದಲು ಇರುವುದಿಲ್ಲ. ಬಿಳಿ ಬಣ್ಣದ ಕುರುಚಲು ಮೀಸೆ, ಗಡ್ಡ ಚಹರೆ ಹೊಂದಿದ್ದು, ಪಿಂಕ್ ಬಣ್ಣದ ತುಂಬು ತೋಳಿನ ಶರ್ಟ್, ಸಿಮೆಂಟ್ ಬಣ್ಣದ ಶ್ವೆಟರ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೃತನ ವಾರಸುದಾರರು ಪತ್ತೆಯಾದಲ್ಲಿ ರೈಲ್ವೇ ಪೊಲೀಸ್ ಠಾಣೆ (08192 259643) ಯನ್ನು ಸಂಪರ್ಕಿಸಬಹುದು.
April 2, 2025