ಮಲೇಬೆನ್ನೂರಿನಲ್ಲಿ ಸಂಭ್ರಮದ ಹೋಳಿ ಆಚರಣೆ

ಮಲೇಬೆನ್ನೂರಿನಲ್ಲಿ ಸಂಭ್ರಮದ ಹೋಳಿ ಆಚರಣೆ

ಮಲೇಬೆನ್ನೂರು, ಮಾ.14- ಹೋಳಿ ಬಣ್ಣದ ಅಂಗವಾಗಿ ಪಟ್ಟಣದ ಮುಖ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದ ನೂರಾರು ಯುವಕರು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಯುವಕರು, ಮಡಿಕೆ ಒಡೆದು ಸಂಭ್ರಮಿಸಿದರು.

ಬಿಜೆಪಿ ಮುಖಂಡರಾದ ಹನಗವಾಡಿ ವೀರೇಶ್, ಚಂದ್ರಶೇಖರ್ ಪೂಜಾರ್, ಐರಣಿ ಅಣ್ಣಪ್ಪ, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ಪುರಸಭೆ ಸದಸ್ಯ ಎಕ್ಕೆಗೊಂದಿ ಕರಿಯಪ್ಪ, ಮಾಜಿ ಸದಸ್ಯರಾದ ಸುಬ್ಬಿ ರಾಜಣ್ಣ, ಪಿ.ಆರ್.ರಾಜು, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು, ಹಿಂದೂ ಮಹಾಗಣಪತಿ ಅಧ್ಯಕ್ಷ ಯರೇಚಿಕ್ಕನಹಳ್ಳಿ ಅಶೋಕ್, ಹೋಳಿ ಆಚರಣೆ ಸಮಿತಿ ಅಧ್ಯಕ್ಷ ಮೇದಾರ್ ರವಿ, ಆರ್ಟ್ಸ್‌ ಮಂಜು, ಪಿಂಟು, ಮೆಡಿಕಲ್ ಷಾಪ್ ರಾಜೀವ್, ಕೊಮಾರನಹಳ್ಳಿ ಸುನೀಲ್, ಗೌಡ್ರ ಶ್ರೀನಿವಾಸ್, ಕಿರಣ್, ರಾಮು, ವಸಂತ್, ಲಿಂಗರಾಜ್, ಪ್ರವೀಣ, ಆಕಾಶ್, ಕಾರ್ತಿಕ್, ಪಿಡಬ್ಲ್ಯೂಡಿ ನಟರಾಜ್ ಸೇರಿದಂತೆ ಇನ್ನೂ ಅನೇಕರು ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. 

ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ ಅವರು ಯುವಕರಿಗೆ ಹೋಳಿ ಬಣ್ಣದ ಶುಭಾಶಯ ಕೋರಿ, ಶಾಂತಿ – ಸೌಹಾರ್ದತೆ ಕಾಪಾಡುವಂತೆ ಹೇಳಿದರು.

ಪಿಎಸ್ಐ ಪ್ರಭು ಕೆಳಗಿನಮನಿ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ರಾಜಸ್ಥಾನಿ ವಿಶೇಷ : ಪಟ್ಟಣದಲ್ಲಿರುವ ರಾಜಸ್ಥಾನಿ ವ್ಯಾಪಾರಸ್ಥರು ತಮ್ಮ ಕುಟುಂಬದವರು ಹಾಗೂ ಬಂಧು-ಬಳಗದವರೊಂದಿಗೆ ಕುಂಬಳೂರು ರಸ್ತೆಯಲ್ಲಿ ಲಕ್ಷ್ಮಿ ಟೈಲ್ಸ್ ಬಳಿ ಇರುವ ಖಾಲಿ ಜಾಗದಲ್ಲಿ ಹೋಳಿ ಆಚರಿಸಿದ್ದು, ವಿಶೇಷವಾಗಿತ್ತು.

error: Content is protected !!