ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಸಂಜೆ 5.30 ಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೋಳಿ ಹುಣ್ಣಿಮೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶ್ರೀಮತಿ ಕೆ. ಸುಶೀಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮತಿ ಪುಷ್ಪಾ ರಾರಾವಿ ಮಹಾಶಿವರಾತ್ರಿ ಬಗ್ಗೆ ಮಾತನಾಡುವರು. ಮಹಿಳಾ ದಿನಾಚರಣೆ ಅಂಗವಾಗಿ ಆಶು ಭಾಷಣ ಸ್ಪರ್ಧೆ ಏರ್ಪಡಿಸಲಾಗಿದ್ದು, ಶ್ರೀಮತಿ ಸುನೀತಾ ಇಂದೂಧರ್ ಮಹಾಕುಂಭಮೇಳ ಅನಿಸಿಕೆ ಹಂಚಿಕೊಳ್ಳುವರು.
ಸಾಧಕಿ ಹಾಗೂ ಸ್ವಯಂ ಉದ್ಯೋಗಿ ಉಮಾ ಅವರಿಗೆ ಈ ಸಂದರ್ಭದಲ್ಲಿ ಗೌರವಿಸಲಾಗುವುದು.ಶ್ರೀಮತಿ ನೀಲಗುಂದ ಜಯಮ್ಮ ನವರಿಂದ ಚಿಂತನ – ಮಂಥನ ನಡೆಯಲಿದೆ ಶ್ರೀಮತಿ ದೊಗ್ಗಳ್ಳಿ ಸುವರ್ಣಮ್ಮ ಉಪಸ್ಥಿತರಿರುವರು ಎಂದು ಹುಣ್ಣಿಮೆ ಸಂಚಾಲಕರಾದ ಶ್ರೀಮತಿ ಮಂಜುಳಾ ಕಾಯಿ ತಿಳಿಸಿದ್ದಾರೆ.