ದಾವಣಗೆರೆ, ಮಾ.13- ಕುಟುಂಬ ಹಾಗೂ ಸಮಾಜಕ್ಕೆ ಶಕ್ತಿ ತುಂಬುವ ಸ್ತ್ರೀಯ ಪಾತ್ರ ಮಹತ್ತರವಾದದ್ದು ಎಂದು ಭಾರತ್ ವಿಕಾಸ್ ಪರಿಷತ್‌ನ ಪ್ರಾಂತೀಯ ಖಜಾಂಚಿ ಪುಟ್ಟಪ್ಪ ಕಾಶಿಪುರ ತಿಳಿಸಿದರು.
ಭಾರತ್ ವಿಕಾಸ್ ಪರಿಷತ್ ಗೌತಮ ಶಾಖೆ ವತಿಯಿಂದ ಇಲ್ಲಿನ ವಿದ್ಯಾನಗರದ ಬಿ.ವಿ.ಪಿ ಶಾಖೆಯ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಮಹಿಳೆ ಎಂಬುದು ಒಂದು ಪದವಲ್ಲ. ಮಹಾ ಇಳೆ ಎಂದರ್ಥ. ಭೂಮಿಯಷ್ಟು ಅಗಾಧ ಹಾಗೂ ಆಳ ಎಲ್ಲವನ್ನು ತನ್ನ ಮಡಿಲಲ್ಲಿ ಇಟ್ಟು ಕಾಯುವವಳು ಆಗಿದ್ದಾಳೆ ಎಂದು ಹೇಳಿದರು.
ಸದಸ್ಯೆ ಸುವರ್ಣ ಶ್ರೀನಿವಾಸ ಮಾತನಾಡಿ, ಜಗತ್ತಿನಲ್ಲಿ ಸ್ತ್ರೀ ಪುರುಷ ಎಂಬ ಭೇದವಿಲ್ಲ. ಎಲ್ಲರೂ ಶಿವನ ಅಂಶ ಎಂದು ತಿಳಿಸಿದರು.
ಪರಿಷತ್‌ನ ಬಾಲ ಮತ್ತು ಮಹಿಳಾ ವಿಕಾಸ್ ಯೋಜನೆಯಡಿ ಕೈ ಕಸೂತಿ ಹಾಗೂ ಹೊಲಿಗೆ ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ `ಮಹಿಳೆ ಮತ್ತು ಆರೋಗ್ಯ’ ಎಂಬ ವಿಷಯ ಕುರಿತು ಡಾ. ಮಾಧವಿ ಹಾಗೂ ಡಾ. ಆರತಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಅಜ್ಜಂಪುರಶೆಟ್ರು ವಿಜಯ್ ಕುಮಾರ್, ಶೀಲಾ ನಾಯಕ, ಭವಾನಿ ಶಂಭುಲಿಂಗಪ್ಪ, ಮಧುಕರ, ಶಾಂತ ತಿಪ್ಪಣ್ಣ, ನೇತ್ರ ಮಧುಕರ್ ಇತರರು ಇದ್ದರು.