ಕುಂಬಳೂರಿನಲ್ಲಿ ವೈಭವದ ರಥೋತ್ಸವ, ಮುಳ್ಳೋತ್ಸವ

ಕುಂಬಳೂರಿನಲ್ಲಿ ವೈಭವದ ರಥೋತ್ಸವ, ಮುಳ್ಳೋತ್ಸವ

ಮಲೇಬೆನ್ನೂರು, ಮಾ. 16- ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ಮಹಾರಥೋತ್ಸವವು ಭಾನುವಾರ ಬೆಳಗಿನ ಜಾವ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದೊಂದಿಗೆ ಜರುಗಿತು.

ರಥೋತ್ಸವದ ವೇಳೆ ಭಕ್ತರು ರಥದ ಮೇಲೆ ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಈ ವೇಳೆ ದೇವರ ಬಾವುಟವನ್ನು ಮಾಗಾನಹಳ್ಳಿ ಹಾಲಪ್ಪನವರ ಹೆಸರಿನಲ್ಲಿ ಅವರ ಪುತ್ರ ಎಂ.ಹೆಚ್.ಮಹೇಂದ್ರ ಅವರು 35 ಸಾವಿರ ರೂ.ಗಳಿಗೆ ಅಂತಿಮವಾಗಿ ಕೂಗಿದರು. 

error: Content is protected !!