ಯಲವಟ್ಟಿ : ಇಂದು ಲಿಂಗೈಕ್ಯ ಶ್ರೀಗಳ ಪುಣ್ಯಾರಾಧನೆ

ಯಲವಟ್ಟಿ : ಇಂದು ಲಿಂಗೈಕ್ಯ ಶ್ರೀಗಳ ಪುಣ್ಯಾರಾಧನೆ

ಮಲೇಬೆನ್ನೂರು ಸಮೀಪದ ಯಲ ವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮದ ವೈರಾಗ್ಯನಿಧಿ ಶ್ರೀ ಶಿವಾನಂದ ಮಹಾ ಸ್ವಾಮೀಜಿಯವರ  20ನೇ ವರ್ಷದ ಪುಣ್ಯಾರಾಧನೆ ಹಾಗೂ ಜ್ಞಾನನಿಧಿ ಶ್ರೀ ನಿತ್ಯಾನಂದ ಮಹಾಸ್ವಾಮೀಜಿಯರ 18ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ವನ್ನು ಇಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಯೋಗಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಅಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಗುರು ಕಲಶ ಸ್ಥಾಪನೆ, ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಭಗವದ್ಗೀತಾ ಸಾಮೂಹಿಕ ಪಾರಾಯಣದ ನಂತರ ಬೆಳಿಗ್ಗೆ 9 ಗಂಟೆಗೆ ಮಹಾತ್ಮರಿಂದ ಪ್ರಣವ ಧ್ವಜಾರೋಹಣ ನೆರವೇರಿಸಲಾಗುವುದು.

ಬೆಳಿಗ್ಗೆ 10 ಗಂಟೆಗೆ ಮತ್ತು ಸಂಜೆ 6 ಗಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ಕಾಯು ವಿಡಿದಾತ್ಮ ರಾಶಿಗೆ ಹಿತವಾವುದಿಹ ಪರದೋಳು ಧರ್ಮರತಿ ಎಂಬ ವಿಷಯ ಕುರಿತು ಪೂಜ್ಯರು ಬೋಧನೆಗೈವರು.

ಚಿತ್ರದುರ್ಗದ ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮೀಜಿ, ದಾವಣಗೆರೆಯ ಜಡೇಸಿದ್ಧ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ, ಹದಡಿ ಚಂದ್ರಗಿರಿ ಮಠದ ಶ್ರೀ ಮುರುಳೀಧರ ಸ್ವಾಮೀಜಿ, ಹೋತನಹಳ್ಳಿಯ ಶ್ರೀ ಶಂಕರಾನಂದ ಸ್ವಾಮೀಜಿ, ಹುಣಸಿಕಟ್ಟಿ ಸಿದ್ಧಾಶ್ರಮದ ಶ್ರೀ ಕೃಷ್ಣಾನಂದ ಭಾರತಿ ಸ್ವಾಮೀಜಿ, ಬಸವಾಪಟ್ಟಣದ ಶ್ರೀಕೃಷ್ಣಾನಂದ ಭಾರತಿ ಸ್ವಾಮೀಜಿ, ಕುಪ್ಪೇಲೂರು ಸಿದ್ದಾರೂಢ ಮಠದ ಶ್ರೀ ಪ್ರಿಯಾನಂದ ಸ್ವಾಮೀಜಿ, ಕುಸನೂರು ಮಠದ ಶ್ರೀ ಜ್ಯೋತಿರ್ಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್. ರಾಮಪ್ಪ, ಹೆಚ್.ಎಸ್. ಶಿವಶಂಕರ್, ಮೋಹನ್‌ಕುಮಾರ್ ಕೊಂಡಜ್ಜಿ, ಕೋಗುಂಡಿ ಬಕ್ಕೇಶಪ್ಪ, ಹನಗವಾಡಿ ಕುಮಾರ್, ಕೆಂಚಮ್ಮನಹಳ್ಳಿ ಸುರೇಶ್, ಸಿರಿಗೆರೆ ನಾಗನಗೌಡ್ರು, ಬಿ. ಚಿದಾನಂದಪ್ಪ, ನಂದಿಗಾವಿ ಶ್ರೀನಿವಾಸ್, ಚಂದ್ರಶೇಖರ್ ಪೂಜಾರ್, ಹನಗವಾಡಿ ವೀರೇಶ್, ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ.ಎಂ. ವಾಗೀಶ್ ಸ್ವಾಮಿ, ಸಿರಿಗೆರೆ ರಾಜಣ್ಣ, ಶ್ರೀನಿವಾಸ್ ದಾಸಕರಿಯಪ್ಪ, ಜಿ.ಬಿ. ವಿನಯಕುಮಾರ್, ಗುತ್ತಿಗೆದಾರ ಸಿ. ಹೆಚ್. ರವಿ, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಹೆಚ್.ಎಸ್. ಮಂಜುನಾಥ್, ಸಿಪಿಐ ಕುಣೆಬೆಳಕೆರೆ ದೇವೇಂದ್ರಪ್ಪ, ಸಿಪಿಐ ಸುನೀಲ್ ಕುಮಾರ್ ಹುಲ್ಮನಿ, ಪಿಎಸ್ಐ ಪ್ರಭು ಸೇರಿದಂತೆ ಇನ್ನೂ ಅನೇಕರು ಭಾಗವಹಿಸಲಿದ್ದಾರೆ.

error: Content is protected !!