ಶಾಂತಿಯುತ ಹೋಳಿ ಆಚರಣೆಗೆ ಹರಿಹರ ಪಿಎಸ್ಐ ಮನವಿ

ಶಾಂತಿಯುತ ಹೋಳಿ ಆಚರಣೆಗೆ ಹರಿಹರ ಪಿಎಸ್ಐ ಮನವಿ

ಹರಿಹರ, ಮಾ.13-   ಪರೀಕ್ಷೆಗಳು  ಆರಂಭವಾಗಿದ್ದು,   ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ  ಆಗದಂತೆ ಹೋಳಿ ಹಬ್ಬವನ್ನು  ಆಚರಿಸುವಂತೆ  ಪಿಎಸ್ಐ ಶ್ರೀಪತಿ ಗಿನ್ನಿ  ಮನವಿ ಮಾಡಿದರು.

ನಗರ ಠಾಣೆಯಲ್ಲಿ ಹೋಳಿ ಹಬ್ಬದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಶಾಂತಿಸಭೆಯಲ್ಲಿ   ಮಾತನಾಡಿದ ಅವರು,  ನಾಳೆ ದಿನಾಂಕ 14 ರಂದು ಹೋಳಿ ಆಚರಣೆ ಮಾಡಲಾಗುತ್ತದೆ.    ಈ ಬಾರಿ ವಿದ್ಯಾರ್ಥಿಗಳ ಪರೀಕ್ಷೆಗಳು ಮತ್ತು ರಂಜಾನ ಹಬ್ಬದ ಉಪವಾಸದ ದಿನಗಳಲ್ಲಿ ಬಂದಿರುವುದರಿಂದ ಯಾರಿಗೂ ಒತ್ತಾಯ ಪೂರ್ವಕವಾಗಿ ಬಣ್ಣವನ್ನು ಹಾಕದೆ,   ಶಾಂತಿಯುತವಾಗಿ   ಹಬ್ಬ ಆಚರಿಸಬೇಕು ಎಂದು  ಹೇಳಿದರು.

ನಗರದ ಬಹುತೇಕ ಬಡಾವಣೆಯಲ್ಲಿ ಮತ್ತು ಪ್ರಮುಖ ವೃತ್ತದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಆದ್ದರಿಂದ ಯುವಕರು ಯಾವುದೇ ರೀತಿಯ ಪ್ರಚೋದನೆ ಮೂಲಕ ಹಬ್ಬವನ್ನು ಆಚರಣೆಯನ್ನು ಮಾಡಲಿಕ್ಕೆ ಮುಂದಾಗಿದ್ದು ಕಂಡುಬಂದರೆ, ಅಂತವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. 

ನಗರಸಭೆ ಸದಸ್ಯ ಮುಜಾಮಿಲ್ ಬಿಲ್ಲು, ಅಂಜುಮಾನ್ ಇಸ್ಲಾಮಿಯಾ ಸಮಿತಿಯ ಮಾಜಿ ಅಧ್ಯಕ್ಷ ಮಹಮ್ಮದ್ ಪೈರೋಜ್, ಹಾಲಿ ಸದಸ್ಯ ಸನಾವುಲಾ ಸಾಬ್  ಕಾಂಗ್ರೆಸ್ ಪಕ್ಷದ ಮುಖಂಡ ಕೊತ್ವಾಲ್ ಹನುಮಂತಪ್ಪ ಮಾತನಾಡಿ, ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ರವಿಕುಮಾರ್, ಕವಿತಾ, ಮಹೇಶ್ ಪೂಜಾರ್, ದುರುಗಪ್ಪ, ದೇವರಾಜ್ ಇತರರು ಹಾಜರಿದ್ದರು.

error: Content is protected !!