ದಾವಣಗೆರೆ, ಮಾ. 9- ಹರಿಹರದ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಕಿಮ್ಸ್) ವತಿಯಿಂದ ನಗರದಲ್ಲಿ ಸಂಚಾರ ನಿಯಮಗಳ ಕುರಿತು ಮೈಮ್ ಮೂಲಕ ಜಾಗೃತಿ ಮೂಡಿಸಲಾಯಿತು.
ನಗರದ ಗುಂಡಿ ವೃತ್ತದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಸಂಚಾರ ನಿಯಮ ಹಾಗೂ ಮಾದಕ ವಸ್ತು ಸೇವನೆ, ಸಾಮಾಜಿಕ ಜಾಲತಾಣಗಳ ಬಳಕೆಿಯಿಂದಾಗುವ ದುಷ್ಪರಿಣಾಮ ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ವಿದ್ಯಾರ್ಥಿಗಳಿಗೆ ಪೊಲೀಸ್ ಸಿಬ್ಬಂದಿ ಸಾಥ್ ನೀಡಿದರು. ಹೆಲ್ಮೆಟ್ ಬಳಕೆಯಿಂದಾಗುವ ಪ್ರಯೋಜನ ಹಾಗೂ ಯಾವ ರೀತಿಯ ಹೆಲ್ಮೆಟ್ ಧರಿಸಬೇಕು. ಐಎಸ್ಐ ಗುರುತಿನ ಹೆಲ್ಮೆಟ್ ಧರಿಸುವ ಕುರಿತು ವಿದ್ಯಾರ್ಥಿಗಳು ಪ್ರದರ್ಶಿಸಿದ ಮೈಮ್ ಗಮನ ಸೆಳೆಯಿತು.
ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವುದು, ವಾಹನ ಚಲಾಯಿಸುವಾಗ ರೀಲ್ಸ್ ಮಾಡುವುದು, ಮೊಬೈಲ್ ಬಳಸುವುದರಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಿದರು. ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮ, ವಾಹನ ಚಲಾಯಿಸುವ ವೇಳೆ ಸಿಗ್ನಲ್ ಜಂಪ್ ಮಾಡುವುದರಿಂದಾಗುವ ಹಾನಿ ಸೇರಿದಂತೆ ಹಲವು ವಿಷಯಗಳ ಕುರಿತು ಜಾಗೃತಿ ಮೂಡಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಎಂ., ಸಂತೋಷ್, ಕಾಲೇಜಿನ ಶಾಮ್ ಜಂಬಗಿ, ಸ್ವಾತಿ ಎಸ್.ಡಿ., ಇಂದಿರಾ, ಆಕಾಶ್ ಚೌಧರಿ, ಕೀರ್ತನಾ, ಸುಮಾ, ಹಾರ್ದಿಕ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.