ಪವಾಡ ಪುರುಷ ಕೂಲಹಳ್ಳಿಯ ಗೋಣಿಬಸವೇಶ್ವರ ರಥೋತ್ಸವ

ಪವಾಡ ಪುರುಷ ಕೂಲಹಳ್ಳಿಯ  ಗೋಣಿಬಸವೇಶ್ವರ ರಥೋತ್ಸವ

ಹರಪನಹಳ್ಳಿ, ಮಾ. 10 – ಮನುಕುಲದ ಕಲ್ಯಾಣಕ್ಕಾಗಿ ಆಚಾರ-ವಿಚಾರ, ಸಂಸ್ಕೃತಿ ಹಾಗೂ ನೀತಿ-ನಿಯಮಗಳ ಪರಿಕಲ್ಪನೆಯಲ್ಲಿ ಧರ್ಮ ಜಾಗೃತಿ ಮೂಡಿಸಿದ ಪವಾಡ ಪುರುಷ ಕೂಲಹಳ್ಳಿಯ ಗೋಣಿಬಸವೇಶ್ವರ ರಥೋತ್ಸವ  ಸೋಮವಾರ  ಸಂಜೆ  ಶ್ರೀ ಗೋಣಿ ಬಸವೇಶ್ವರ ರಥೋತ್ಸವ ವೈಭವೋ ಪೇತವಾಗಿ ಜರುಗಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರ ದಂಡು ಗೋಣಿ ಬಸವೇಶ್ವರ ಸ್ವಾಮಿ ದರ್ಶನ ಪಡೆದು ಪುನೀತರಾದರು.

ನಾಡಿನಾದ್ಯಂತ ವಿವಿಧ ದೇವರುಗಳ ರಥೋತ್ಸವ ನಡೆಯುವುದು ಸಾಮಾನ್ಯ. ಆ ರೀತಿ ನಡೆಯುವ ರಥೋತ್ಸವಗಳಲ್ಲಿ ಆ ಸ್ಥಳದ ದೇವರ ಉತ್ಸವ ಮೂರ್ತಿ ರಥ ಏರುವುದು ಸಹಜ, ಆದರೆ, ಕೂಲಹಳ್ಳಿಯ ಪವಾಡ ಪುರುಷ ಗೋಣಿಬಸವೇಶ್ವರ ರಥೋತ್ಸವದಲ್ಲಿ ರಥ ಏರುವುದು ಕೊಟ್ಟೂರು ಗುರುಬಸವೇಶ್ವರರು ಇದು ಇಲ್ಲಿಯ ವೈಶಿಷ್ಟ್ಯವಾಗಿದೆ.

ರಥವನ್ನು ವಿವಿಧ ವಸ್ತ್ರ ಹೂವುಗಳು, ದೇವಾನುದೇವತೆಗಳ ಭಾವಚಿತ್ರ, ಬಾಳೆದಿಂಡು, ಮಾವಿನ ತೋರಣಗಳಿಂದ ಅಲಂಕರಿಸಲಾಗಿತ್ತು. ಮಠದ ಪೀಠಾಧಿಪತಿ ಶ್ರೀ ಪಟ್ಟದ ಚಿನ್ಮಯ ಸ್ವಾಮೀಜಿ ನೇತ್ರತ್ವದಲ್ಲಿ  ಬಿರುದಾವಳಿ  ಮೂಲಕ ಸಕಲ ವಾದ್ಯ ತಂಡಗಳು ಕೊಟ್ಟೂರೇಶ್ವರ  ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ದೇಗುಲದಲ್ಲಿನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ  ಕುಳ್ಳಿರಿಸಿಕೊಂಡು ಮೆರವಣಿಗೆ ನಡೆಸಲಾಯಿತು. ರಥಕ್ಕೆ ಪ್ರದಕ್ಷಣಿ ಹಾಕಿ ನಂತರ ಗೋಣಿಬಸವೇಶ್ವರರ ಧ್ವಜವನ್ನು ಬಹಿರಂಗ ಹರಾಜು ಮಾಡಲಾಯಿತು.  ಆರ್ಚಕರು ಮಹಾ ಮಂಗಳಾರತಿ ನೆರವೇರಿಸುತ್ತಿದಂತೆಯೇ ಜಯ ಘೋಷಗಳ ನಡುವೆ ರಥೋತ್ಸವ ನಡೆಯಿತು.

ಹರಕೆ ಹೊತ್ತ ಭಕ್ತರು ರಥಕ್ಕೆ ತೆಂಗಿನಕಾಯಿ, ಬಾಳೆಹಣ್ಣು, ಉತ್ತುತ್ತಿ ಹಣ್ಣು, ತೂರಿ ಹರಕೆ ತೀರಸಿದರು. ಶ್ರೀ ಗೋಣಿಬಸವೇಶ್ವರ ರಥೋತ್ಸವಕ್ಕೆ ಸುತ್ತಿಲಿನ  ಎತ್ತಿನ ಬಂಡೆ, ಟ್ರಾಕ್ಟರ್, ಕಾರು, ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದರೆ, ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದರು.

error: Content is protected !!