ಮಲೇಬೆನ್ನೂರು, ಮಾ. 7- ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇತ್ತೀಚೆಗೆ ಕೊಕ್ಕನೂರಿಗೆ ತೆರಳುವ ಮಾರ್ಗ ಮಧ್ಯೆ ಜಿ. ಬೇವಿನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೀಡಿದ ಸನ್ಮಾನವನ್ನು ಸ್ವೀಕರಿಸಿ, ಬಳಿಕ ಭದ್ರಾ ನಾಲೆಯನ್ನು ವೀಕ್ಷಣೆ ಮಾಡಿದರು.
ಈ ನಾಲೆಯಲ್ಲಿ ಎಷ್ಟು ಪ್ರಮಾಣದ ನೀರು ಹರಿಯಬೇಕಿತ್ತು. ಈಗ ಎಷ್ಟು ಪ್ರಮಾಣದ ನೀರು ಹರಿಯುತ್ತಿದೆ. ಈ ನಾಲೆ ನೀರು ಎಷ್ಟು ಹಳ್ಳಿಗಳಿಗೆ ಹೋಗುತ್ತದೆ ಎಂಬೆಲ್ಲಾ ಮಾಹಿತಿ ಪಡೆದುಕೊಂಡ ಪ್ರಭಾ ಅವರು, ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ನೀರು ಸಮರ್ಪಕವಾಗಿ ಹರಿಯುವಂತೆ ಮಾಡಲು ಅಗತ್ಯ ಯೋಜನೆಗಳ ಜಾರಿಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.
ಜಿಗಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್, ಗ್ರಾ.ಪಂ. ಉಪಾಧ್ಯಕ್ಷ ದೇವರಾಜ್, ಗ್ರಾ.ಪಂ. ಸದಸ್ಯರಾದ ಶ್ರೀಮತಿ ಆಶಾ ಅಣ್ಣಪ್ಪ, ಹೆಚ್. ಆನಂದ್ ಹೋಬಳಿಗೌಡ, ಗ್ರಾಮಸ್ಥರಾದ ಹೆಚ್. ಬಂಗಾರಪ್ಪ, ಮಡಿವಾಳಪ್ಪ, ಎಂ. ಚಂದ್ರಪ್ಪ, ದಾಸಪ್ಪಜ್ಜರ ನಿಂಗಪ್ಪ ಮತ್ತು ಕಾಂಗ್ರೆಸ್ ಮುಖಂಡರಾದ ಜಿ. ಮಂಜುನಾಥ್ ಪಟೇಲ್, ಜಿಗಳಿ ಆನಂದಪ್ಪ, ಗುತ್ತೂರು ಹಾಲೇಶ್ ಗೌಡ, ಎಂ.ಹೆಚ್. ಮಹೇಂದ್ರ, ಪಿ.ಹೆಚ್. ಶಿವಕುಮಾರ್ ಮತ್ತಿತರರು ಈ ವೇಳೆ ಹಾಜರಿದ್ದರು.