ಕೊಕ್ಕನೂರಿನಲ್ಲಿ ಸಂಸದರಿಗೆ ಅದ್ಧೂರಿ ಸ್ವಾಗತ

ಕೊಕ್ಕನೂರಿನಲ್ಲಿ ಸಂಸದರಿಗೆ ಅದ್ಧೂರಿ ಸ್ವಾಗತ

ಮಲೇಬೆನ್ನೂರು, ಮಾ. 6 – ಲೋಕಸಭಾ ಸದಸ್ಯರಾದ ಬಳಿಕ ಮೊದಲ ಬಾರಿಗೆ ಕೊಕ್ಕನೂರು ಗ್ರಾಮಕ್ಕೆ ಆಗಮಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಗ್ರಾಮದ ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಂಡರು. 

ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದಾರಿಯುದ್ದಕ್ಕೂ ಹೂವಿನ ಮಳೆ ಸುರಿಸಿ ಮತ್ತು ಡೊಳ್ಳು, ಡ್ರಮ್ ಸೆಟ್ ಭಾರಿಸಿ, ಪಟಾಕಿ ಸಿಡಿಸಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. 

ಗ್ರಾಮ ದೇವತೆ ದುರ್ಗಾದೇವಿ ದರ್ಶನ ಪಡೆದ ಬಳಿಕ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದ ಸಂಸದರಿಗೆ ಅರ್ಚಕ ಹನುಮಂತರಾಯರು ಮತ್ತು ಕೇಶವ ಅವರು, ಚುನಾವಣಾ ಪೂರ್ವದಲ್ಲಿ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಿಮ್ಮ ಗೆಲುವಿಗೆ ದೇವರಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದನ್ನು ಅವರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಶ್ರೀ ಆಂಜನೇಯ ಸ್ವಾಮಿ ಕಮಿಟಿ ವತಿಯಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ನಂತರ ಕಲ್ಯಾಣ ಮಂಟಪದಲ್ಲಿ ಜನ ಸಾಮಾನ್ಯರ ಅಹವಾಲು ಸ್ವೀಕರಿಸಿದ ಸಂಸದರಿಗೆ ಕೊಕ್ಕನೂರು ಗ್ರಾಮಕ್ಕೆ ಪಿಯು ಕಾಲೇಜು ಮಂಜೂರು ಮಾಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.  ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದ ಸಂಸದರು ಕೆಲವೊಂದು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್. ರಾಮಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹನಗವಾಡಿ ಕುಮಾರ್, ಮುಖಂಡರಾದ ಜಿ. ಮಂಜುನಾಥ್ ಪಟೇಲ್, ಜಿಗಳಿ ಆನಂದಪ್ಪ, ಗುತ್ತೂರು ಹಾಲೇಶ್ ಗೌಡ, ಗ್ರಾಮಸ್ಥರಾದ ಗಿಡ್ಲಕ್ಕರ್ ರೇವಣಸಿದ್ದಪ್ಪ, ದಾಸರ ಸೋಮಶೇಖರ್, ಗೋವಿಂದಪ್ಪ ತೊಗಲಪ್ಪರ್, ಸಜ್ಜೇರ್ ಬಸವರಾಜಪ್ಪ, ಚೋಲಪ್ಪರ್ ಬೀರಪ್ಪ, ಮುಂದ್ಲುಮನೆ ನಿಂಗಪ್ಪ, ದಾಸರ ಬಸವರಾಜಪ್ಪ, ಹೆಚ್. ನಾಗರಾಜ್, ದಾಸರ ನಾಗರಾಜ್, ಕುಬೇರಗೌಡ ಕಂಬತ್ತನಹಳ್ಳಿ, ಕುಂಬಳೂರಿನ ಎಂ.ಹೆಚ್. ಮಹೇಂದ್ರ ಮಲೇಬೆನ್ನೂರಿನ ಪಿ.ಹೆಚ್. ಶಿವಕುಮಾರ್ ಮತ್ತು ಗ್ರಾಮದ ಮಹಿಳೆಯರಾದ ಶ್ರೀಮತಿ ಪುಷ್ಪಾ ಕುಬೇರಪ್ಪ, ವೀಣಾ ಹುಲ್ಮನಿ, ಪದ್ಮಮ್ಮ, ಅಂಜಲಿ ದಾಸರ, ದಿವ್ಯಾ , ದೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

ಸಮರ್ಥ್ ಶಾಮನೂರು ಸ್ನೇಹ ಬಳಗದ ಮಾರುತಿ ದಾಸರ್, ನಿರಂಜನ್ ಗೋಪನಹಳ್ಳಿ, ಎಸ್ ಮಲ್ಲಿಕಾರ್ಜುನ್, ಎಸ್. ಜಗದೀಶ್, ಟಿ.ಆರ್. ಪ್ರಶಾಂತ್  ಸೇರಿದಂತೆ ಮತ್ತಿತರರು ಸಂಸದರ ಆಗಮನದ ರೂಪು ರೇಷೆಯನ್ನು ನಿರ್ವಹಿಸಿದ್ದರು.

error: Content is protected !!