ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಶರಣ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಜಿಲ್ಲಾ ಯುವ ವೇದಿಕೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಇಂದು ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ.
ಸಾಣೇಹಳ್ಳಿಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ನಡೆಯುವ ಲಿಂ. ಶ್ರೀಮತಿ ಹಾಲಮ್ಮ ಮತ್ತು ಲಿಂ. ಜಿ. ಮಲ್ಲಿಕಾರ್ಜುನಪ್ಪ, ಭೀಮಸಮುದ್ರ ಇವರ ದತ್ತಿ (ದಾಸೋಹಿಗಳಾದ ಗಾಯತ್ರಿ ಸಿದ್ದೇಶ್ವರ ಹಾಗೂ ಜಿ.ಎಂ. ಸಿದ್ದೇಶ್ವರ) ಕಾರ್ಯಕ್ರಮದಲ್ಲಿ ಶರಣ ಸಿರಿ ಪ್ರಶಸ್ತಿಯನ್ನು ಚನ್ನಗಿರಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಹೆಚ್.ಎಸ್. ಮಲ್ಲಿಕಾರ್ಜುನಪ್ಪ ಅವರಿಗೆ ನೀಡಲಾಗುತ್ತಿದೆ. ಡಾ. ಸಿ. ಸೋಮಶೇಖರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಡಾ. ಬಸವರಾಜ ನೆಲ್ಲಿಸರ ಬಸವಣ್ಣನವರ ಬಹುಮುಖಿ ವ್ಯಕ್ತಿತ್ವ ವಿಷಯ ಕುರಿತು ಅನುಭಾವ ನುಡಿಗಳನ್ನಾಡಲಿದ್ದಾರೆ.