ದೊಡ್ಡಬಾತಿಯಲ್ಲಿ ಸದ್ಭಾವನಾ ಶೋಭಾಯಾತ್ರೆ

ದೊಡ್ಡಬಾತಿಯಲ್ಲಿ ಸದ್ಭಾವನಾ ಶೋಭಾಯಾತ್ರೆ

ದಾವಣಗೆರೆ, ಮಾ. 5 – ಇಲ್ಲಿಗೆ ಸಮೀಪದ ದೊಡ್ಡಬಾತಿ ಗ್ರಾಮದಲ್ಲಿ ಪ್ರಜಾಪಿತ  ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ದಿನದಂದು ಶಿವ ಧ್ವಜಾರೋಹಣ ಹಾಗೂ ರಾಜಬೀದಿಗಳಲ್ಲಿ ಶಿವಲಿಂಗಗಳ ಶೋಭಾಯಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ದೊಡ್ಡಬಾತಿಯ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೌರ ಅವರ ನೇತೃತ್ವದಲ್ಲಿ ಈ ಶೋಭಾಯಾತ್ರೆ ನೆರವೇರಿತು. ಗ್ರಾಮದ ದೈವೀ ಸಹೋದರ ಹಾಗೂ ಸಹೋದರಿಯರು ಸದ್ಭಾವನಾ ಶಾಂತಿಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!