ದಾವಣಗೆರೆ, ಫೆ. 27 – ನಗರದ ಹೊಂಡದ ಸರ್ಕಲ್, ತುಳಸಿ ಪಾರ್ಕ್ ಬಳಿಯ ಶ್ರೀ ಕೇದಾರನಾಥ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಶ್ರೀ ಗಣಪತಿ ಹೋಮ, ನವಗ್ರಹ ಪೂಜೆ, ನಂತರ ಶ್ರೀ ಸ್ವಾಮಿಗೆ ರುದ್ರಾಭಿಷೇಕ ನಡೆಯಿತು.
ಇದೇ ಸಂದರ್ಭದಲ್ಲಿ ಉಕೀ ಮಠದ ಶ್ರೀ ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರ ಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬರುವ ಮಾರ್ಚ್ 2ರ ಶುಕ್ರವಾರ ಬೆಳಿಗ್ಗೆ 7 ಘಂಟೆಗೆ ಹಿಮಾಲಯದ ಶ್ರೀ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಗುವುದು ಎಂದು ಪಂಚಾಂಗ ಶ್ರವಣದ ಮೂಲಕ ತಿಳಿಸಲಾಯಿತು ಎಂದು ಇಂದೂಧರ್ ನಿಶಾನಿಮಠ್ ತಿಳಿಸಿದ್ದಾರೆ.