ಚನ್ನಗಿರಿ ತಾಲ್ಲೂಕು ಸುಕ್ಷೇತ್ರ ಮಾವಿನಹೊಳೆ ಶ್ರೀ ಗುರು ಮಹಾರುದ್ರಸ್ವಾಮಿ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮವು ಇಂದಿನಿಂದ ಮೂರು ದಿನ ನಡೆಯಲಿದೆ.
ಇಂದು ರಾತ್ರಿ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ತಾವರಗೆರೆ, ಶಿಲಾಮಠಾಧ್ಯಕ್ಷರು ಅವರ ಸಾನ್ನಿಧ್ಯದಲ್ಲಿ ಶ್ರೀ ಗುರುಮಹಾರುದ್ರಸ್ವಾಮಿ, ಅಡ್ಡಪಲ್ಲಕ್ಕಿ ಉತ್ಸವವು ಶ್ರೀ ಮಠಕ್ಕೆ ಆಗಮಿಸುವುದು. ನಂತರ ಬೆಳಗಿನ ಜಾವ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಮಹಾ ರುದ್ರಾಭಿಷೇಕ, ಅಷ್ಟೋತ್ತರ, ಸಹಸ್ರ ಬಿಲ್ವಾರ್ಚನೆ ಪಾದ ಪೂಜೆ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯುವವು.
ನಾಳೆ ಗುರುವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಗುರು ಮಹಾರುದ್ರಸ್ವಾಮಿ ಅಭಿಷೇಕ, ಮಹಾಪೂಜೆ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಜರುಗುವವು. ದಿನಾಂಕ 28ರ ಶುಕ್ರವಾರ ಬೆಳಿಗ್ಗೆ 11.30 ರಿಂದ ಭದ್ರಕಾಳಿ ಅಮ್ಮನವರ ಜಾತ್ರೆ ಮತ್ತು ಪ್ರಸಾದ ವಿನಿಯೋಗವಿರುತ್ತದೆ.