ಹರಿಹರ, ಫೆ.25- ಹರಿಹರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತದ ಆವರಣದಲ್ಲಿ ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಅಂಬಾಸಾ ಮೆಹರ್ವಾಡೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಗೀತಾಬಾಯಿ ಭೂತೆ ಮಾತ್ರ ನಾಮಪತ್ರವನ್ನು ಸಲ್ಲಿಸಿದ್ದರಿಂದ, ಅಧ್ಯಕ್ಷರಾಗಿ ಅಂಬಾಸಾ ಮೆಹರ್ವಾಡೆ, ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾಬಾಯಿ ಭೂತೆ ಅವರುಗಳ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಹೆಚ್.ಸುನೀತ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ವಿಶ್ವನಾಥ್ ಭೂತೆ, ಹೆಚ್ ಹರಿಯಪ್ಪ, ಮೆಸಾಕ್, ಎನ್.ಎಂ.ರಾಜು, ಅಂಬಾಸಾ ಎನ್.ಕೆ. ಶ್ರೀಮತಿ ಎಂ. ಸ್ವಾತಿ, ನಾಗೋಸಾ ಜಿ ಮೆಹರ್ವಾಡೆ ಸಂಘದ ಕಾರ್ಯದರ್ಶಿ ಬಸವರಾಜ್ ಭಂಡಾರಿ, ಸಿಬ್ಬಂದಿ ಆದರ್ಶ ಇತರರು ಹಾಜರಿದ್ದರು.