ದಾವಣಗೆರೆ, ಫೆ.25- ಇನ್ಸ್ಟ್ರಾಗ್ರಾಂನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಶೈಲಿ, ಉನ್ನತ ಪದವಿ, ಮೀಸಲಾತಿ ಹಾಗೂ ಜೈ ಭೀಮ್ ಎನ್ನುವ ಪದದ ಬಗ್ಗೆ ಕೆಟ್ಟದಾಗಿ ವೀಡಿಯೋ ಮಾಡಿ ಹರಿ ಬಿಟ್ಟಿದ್ದು, ಇದರಿಂದ ಅಂಬೇಡ್ಕರ್ ಅಭಿಮಾನಿಗಳು, ಅನುಯಾಯಿಗಳು ಹಾಗೂ ಭಾರತೀಯರಿಗೆ ಮಾನಸಿಕವಾಗಿ ಧಕ್ಕೆ ಉಂಟಾಗಿದೆ.
ಸಮಾಜದ ಸುವ್ಯವಸ್ಥೆ ಕೂಡಾ ಹಾಳಾಗಿದ್ದು, ಕ್ರಮ ಕೈಗೊಳ್ಳುವಂತೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಾಟ್ಸ್ಆಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ, ವ್ಯಕ್ತಿ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್ಗಳು, ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕುವುದು ಮತ್ತು ಶೇರ್ ಮಾಡುವುದು ಕಾನೂನು ಬಾಹಿರವಾಗಿದ್ದು, ಅಂತ ಪೋಸ್ಟ್ ಮಾಡುವಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.