ಈಶ್ವರ ಪಾರ್ವತಿ ಸ್ವಾಮಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ, ಬಿಲ್ವಾರ್ಚನೆ

ಈಶ್ವರ ಪಾರ್ವತಿ ಸ್ವಾಮಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ, ಬಿಲ್ವಾರ್ಚನೆ

ಶ್ರೀ ಈಶ್ವರ ಪಾರ್ವತಿ ಸ್ವಾಮಿ ದೇವಸ್ಥಾನ ಟ್ರಸ್ಟ್‌ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯು ಭವನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಇಂದು ಬೆಳಿಗ್ಗೆ 5ರಿಂದ ಶಿವನಿಗೆ ರುದ್ರಾಭಿಷೇಕ  ಮತ್ತು ಸಹಸ್ರ ಬಿಲ್ವಾರ್ಚನೆ ಪೂಜೆ, ಸಂಜೆ 6 ರಿಂದ ಶಿವನ ದರ್ಶನದ ವ್ಯವಸ್ಥೆ ಇರುತ್ತದೆ.

ಸಂಜೆ 7ಕ್ಕೆ ದೇವಸ್ಥಾನದ ಆವರಣದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಭರತನಾಟ್ಯ, ಭಜನಾ ಕಾರ್ಯಕ್ರಮಗಳು ಹಾಗೂ ಜಾಗರಣೆ ನಡೆಯುತ್ತದೆ.

ಕಾರ್ಯಕ್ರಮ ಉದ್ಘಾಟನೆಯನ್ನು ಬೆಳವನೂರು ನಾಗರಾಜಪ್ಪ, ಉದ್ಘಾ ಟನೆಯನ್ನು ಗಿರೀಶ್‌ ಮುದೇಗೌಡ್ರು, ಅತಿಥಿಗಳಾಗಿ ಡಾ.ಹೆಚ್.ಎಸ್‌. ಮಂಜುನಾಥ ಕುರ್ಕಿ, ಜಿ.ಡಿ. ಗುರುಸ್ವಾಮಿ ಗಂಗನಕಟ್ಟೆ, ಶಿವಕುಮಾರ ಡಿ.ಎಂ. ಹಾಜರಿರುವರು. ರಾತ್ರಿ 7 ರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

error: Content is protected !!