ದಾವಣಗೆರೆ, ಫೆ. 24 – ನಗರದ ಸಪ್ತಗಿರಿ ಶಾಲೆ ಹತ್ತಿರ ಇರುವ ಅಶ್ವಿನಿ ಕ್ಲಿನಿಕ್ನಲ್ಲಿ ಸುಜಲಾನ್ ಸಂಸ್ಥೆಯ ಸಂಸ್ಥಾಪಕ ತುಳಸಿ ತಂತಿ ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ದಾವಣಗೆರೆ ಲಯನ್ಸ್ ಕ್ಲಬ್, ರೋಟರಿ ಸಂಸ್ಥೆ ದಾವಣಗೆರೆ ಸೌತ್, ರೆಡ್ಕ್ರಾಸ್, ರಿದ್ದಿ ಫೌಂಡೇಷನ್, ಗೋಗ್ರೀನ್ ಫೌಂಡೇಷನ್ ಇವರ ಸಹಭಾಗಿತ್ವದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳುವಯ್ಯ ಮಾತನಾಡಿದರು.