ಭಾವಸಾರ ಕ್ಷತ್ರಿಯ ತರುಣ ಮಂಡಳಿಯಿಂದ ಶಿವಾಜಿ ಜಯಂತಿ

ಭಾವಸಾರ ಕ್ಷತ್ರಿಯ ತರುಣ ಮಂಡಳಿಯಿಂದ ಶಿವಾಜಿ ಜಯಂತಿ

ದಾವಣಗೆರೆ, ಫೆ. 24 – ನಗರದ ಮಹಾರಾಜಪೇಟೆಯ ಶ್ರೀ ವಿಠಲ ರುಕುಮಾಯಿ ದೇವಸ್ಥಾನದಲ್ಲಿ ಶ್ರೀ ಭಾವಸಾರ ಕ್ಷತ್ರಿಯ ತರುಣ ಮಂಡಳಿಯ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವವು  ವಿಜೃಂಭಣೆಯಿಂದ ಜರುಗಿತು. 

ದೈವ ಮಂಡಳಿಯ ಅಧ್ಯಕ್ಷ ರಘು ಮೊಸಳೆ, ಭಜನಾ ಮಂಡಳಿಯ ಅಧ್ಯಕ್ಷ ನಿಂಗುಸ್ವಾಮಿ ಖಮಿತ್ಕರ್ ಮತ್ತು ತರುಣ ಮಂಡಳಿ ಅಧ್ಯಕ್ಷ ವಿನಾಯಕ್ ಟಿಕಾರೆ ಹಾಗೂ ಇತರೆ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. 

ವಿಶೇಷ ಆಹ್ವಾನಿತರಾಗಿ ಭಾವಸಾರ ವಿಜನ್ ಅಧ್ಯಕ್ಷ ಮಂಜುನಾಥ ಪುಟಾಣ್ಕರ್ ಮತ್ತು ನಿಂಗುಸ್ವಾಮಿ ಖಮಿತ್ಕರ್, ಚಂದ್ರಕಾಂತ್ ವಾದೋನಿ ಅವರುಗಳು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮಾತನಾಡಿದರು.   

error: Content is protected !!