ಗೋವಾದ ಶ್ರೀ ವಿಮಲೇಶ್ವರ ಸಮಿತಿಗೆ ಉಪಾಧ್ಯಕ್ಷರಾಗಿ ರೇವಣಕರ್ ಆಯ್ಕೆ

ಗೋವಾದ ಶ್ರೀ ವಿಮಲೇಶ್ವರ ಸಮಿತಿಗೆ ಉಪಾಧ್ಯಕ್ಷರಾಗಿ ರೇವಣಕರ್ ಆಯ್ಕೆ

ದಾವಣಗೆರೆ, ಫೆ. 24- ಗೋವಾದ ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಸರ್ವ ಸದಸ್ಯರ ಮಹಾಸಭೆ ಯಲ್ಲಿ ದಾವಣಗೆರೆಯ ಡಾ. ಅರುಣಾಚಲ ಎನ್.ರೇವಣಕರ್‍ ಅವರು ಸರ್ವಾ ನುಮತದಿಂದ ಅವಿರೋಧವಾಗಿ ಉಪಾಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ರಾಮನಾಥ ಪ್ರಭು ದೇಸಾಯಿ ತಿಳಿಸಿದ್ದಾರೆ.

ದೈವಜ್ಞ ಸಮಾಜದ ರೇವಣಕರ ಪರಿವಾರದ ಪದಾಧಿಕಾರಿಗಳು, ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಸರ್ವ ಸದಸ್ಯರ ಮಹಾಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿಗಂಬರ ಪ್ರಭು ದೇಸಾಯಿ, ಖಜಾಂಚಿ ನಾರಾಯಣ ಜಿ.ಪ್ರಭು ದೇಸಾಯಿ, ಸಹ ಕಾರ್ಯದರ್ಶಿ ಮಧುರ ಎನ್.ಪ್ರಭು ದೇಸಾಯಿ, ಸಮಿತಿ ಸದಸ್ಯರಾದ ಜಯಂತ್ ಪ್ರಭು ದೇಸಾಯಿ, ಮಹೇಲ ಕೆ.ರೇವಣಕರ್, ದಾವಣಗೆರೆಯ  ನಲ್ಲೂರು ಲಕ್ಷ್ಮಣರಾವ್ ನರಹರಿ ರೇವಣಕರ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!