ದಾವಣಗೆರೆ, ಫೆ. 23- ನಮ್ಮ ದಾವಣಗೆರೆ ಫೌಂಡೇಷನ್ ವತಿಯಿಂದ, ಸಂಘದ ಸಂಸ್ಥಾಪಕ ಸದಸ್ಯರೂ, ಮಹಾನಗರ ಪಾಲಿಕೆ ಮಾಜಿ ವಿಪಕ್ಷ ನಾಯಕರೂ ಆದ ಕೆ. ಪ್ರಸನ್ನ ಕುಮಾರ್ ಅವರ ಜನ್ಮದಿನದ ಅಂಗವಾಗಿ ಪೌರ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ನೀಡುವ ಸದುದ್ಧೇಶದಿಂದ `ಜ್ಞಾನ ನಿಧಿ’ ಕಾರ್ಯಕ್ರಮವನ್ನು ನಡೆಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೆ. ಪ್ರಸನ್ನಕುಮಾರ್ ಅವರ ಕಾರ್ಯಕ್ಷಮತೆ, ನಾಯಕತ್ವದ ಗುಣ, ಜನಪರ ಕಾಳಜಿ ಬಗ್ಗೆ ಶ್ಲ್ಯಾಘಿಸಿದರು.
ನಮ್ಮ ದಾವಣಗೆರೆ ಫೌಂಡೇಷನ್ ಸಂಘ ಕಳೆದ ಎರಡು ವರ್ಷಗಳಿಂದ ನಡೆದು ಬಂದ ಹಾದಿ, ಈ ಸಂಘವನ್ನು ಸ್ಥಾಪಿಸಿದ ಉದ್ದೇಶದ ಬಗ್ಗೆ ಪವನ್ ರೇವಣಕರ್ ಮಾತನಾಡಿದರು.
ನಂತರ ಮೊದಲ ಹಂತದಲ್ಲಿ ಸುಮಾರು 20 ಮಕ್ಕಳಿಗೆ ಪ್ರೋತ್ಸಾಹ ಧನದ ಚೆಕ್ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು,
ಬಿಜೆಪಿ ಮುಖಂಡರಾದ ಅಣಬೇರು ಜೀವನಮೂರ್ತಿ, ಹೆಚ್.ಎನ್ ಶಿವಕುಮಾರ್, ಕೊಳೇನಹಳ್ಳಿ ಬಿ.ಎಂ. ಸತೀಶ್, ಪಿ.ಎಸ್. ಜಯಣ್ಣ, ಪಾಲಿಕೆ ಸದಸ್ಯರಾದ ಆರ್.ಶಿವಾನಂದ್, ಯುವ ಮುಖಂಡರಾದ ವಿನಯ್ ದಿಳ್ಯಪ್ಪ, ರೇಖಾ ಸುರೇಶ್ ಗುಂಡಗಾಳೆ, ಗೀತಾ ದಿಳ್ಯಪ್ಪರ, ಗೌರಮ್ಮ ಗಿರೀಶ್, ಉಮಾ ಪ್ರಕಾಶ್, ಕುಂಬಾರ್ ನಾಗಣ್ಣ, ಗೋಣೆಪ್ಪ, ನರೇಂದ್ರ ಕುಮಾರ್, ಶ್ರೀಮತಿ ಹೆಗ್ಗಪ್ಪ ಮತ್ತಿತರರು ಭಾಗವಹಿಸಿದ್ದರು.
ಶಾಸಕ ಬಿ.ಪಿ. ಹರೀಶ್ ಅವರು ಪ್ರಸನ್ನ ಕುಮಾರ್ ಅವರಿಗೆ ಶುಭ ಹಾರೈಸಿದರು.
ಸುರೇಶ್, ಪದ್ಮನಾಭ ಶೆಟ್ರು, ಮುಕುಂದಪ್ಪ, ಪಾಟೀಲ್, ಸಂಗನ ಗೌಡ್ರು ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.