ಕಲೆಯನ್ನು ಮೈಗೂಡಿಸಿಕೊಂಡರೆ ಸಮೃದ್ಧಿ, ನೆಮ್ಮದಿ ಜೀವನ ಸಾಧ್ಯ

ಕಲೆಯನ್ನು  ಮೈಗೂಡಿಸಿಕೊಂಡರೆ ಸಮೃದ್ಧಿ, ನೆಮ್ಮದಿ ಜೀವನ ಸಾಧ್ಯ

ಹರಿಹರ ಶಾಸಕ ಬಿ.ಪಿ. ಹರೀಶ್‌

ಹರಿಹರ, ಫೆ. 23 – ಸಂಗೀತ, ನೃತ್ಯ, ನಾಟಕ, ಕಲೆಯನ್ನು  ಮೈಗೂಡಿಸಿ ಕೊಂಡರೆ ಬದುಕಿನಲ್ಲಿ ಸಮೃದ್ಧಿ ಮತ್ತು  ನೆಮ್ಮದಿಯ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.

ನಗರದ ಗುರು ಭವನದಲ್ಲಿ ಯುವ ಗಾಯಕ ಅಣ್ಣಪ್ಪ ಅಜ್ಜೇರ ಅವರ ನೇತೃತ್ವದಲ್ಲಿ ಶ್ರೀ ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್  ಇವರ ಆಶ್ರಯದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ ಅವರ ಸವಿನೆನಪಿಗಾಗಿ ವಾಯ್ಸ್ ಆಫ್ ಪವರ್ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಪಂಡಿತ ಪುಟ್ಟರಾಜ ಗವಾಯಿಗಳು ಸೇರಿದಂತೆ ಅನೇಕ ಸಂಗೀತ ವಿದ್ವಾಂಸರು ತಮ್ಮ ಹಾಡುಗಳ ಮೂಲಕ ಸಮಾಜ ಸುಧಾರಣೆ ತರುವಂತಹ ಕೆಲಸವನ್ನು ಮಾಡಿ ಜನರ ಹೃದಯದಲ್ಲಿ ನೆಲೆಸಿದರು. ಅಷ್ಟೊಂದು ಮಹತ್ವ ಸಂಗೀತ, ನೃತ್ಯ, ನಾಟಕಗಳಿಗೆ ಇರುತ್ತದೆ ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಅಣ್ಣಪ್ಪ ಅಜ್ಜೇರ್, ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ, ಸಾರಥಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಣಿ ಬಸಪ್ಪ, ಕವಿತಾ ಮಲ್ಲಿಕಾರ್ಜುನ್‌, ಪರಸಪ್ಪ ಅಜ್ಜೇರ, ಸುಕನ್ಯಾ  ಸೇರಿದಂತೆ ತೀರ್ಪುಗಾರರು, ಗಾಯಕರು ಸೇರಿದಂತೆ ಇತರರಿದ್ದರು.

error: Content is protected !!