ನಗರದಲ್ಲಿ ಇಂದು ಕದಳಿ ಕಮ್ಮಟದಲ್ಲಿ ದತ್ತಿ, ಕಾರ್ಯಕ್ರಮ, ವಚನ ದಾಸೋಹ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದಿಂದ 162ನೇ ಕದಳಿ ಕಮ್ಮಟದಲ್ಲಿ ದತ್ತಿ ಕಾರ್ಯಕ್ರಮ, ವಚನ ದಾಸೋಹ ಹಾಗೂ ಶರಣ ಕಿನ್ನರಿ ಬೊಮ್ಮಯ್ಯನವರ ಶರಣೋ ತ್ಸವವು ಇಂದು ಮಧಾಹ್ನ 3ಕ್ಕೆ ಬಿ.ಇ.ಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಮತಾ ನಾಗರಾಜ್‌ ವಹಿಸಲಿದ್ದು, ಪ್ರಾಂಶುಪಾಲರಾದ ಡಾ. ನೀತಾ ಎ.ಜೆ. ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಮಂಜುನಾಥ್‌ ಆಲೂರು ಉಪಸ್ಥಿತರಿರುವರು. ಡಾ. ಮಹಾಂತೇಶ್‌ ಪಾಟೀಲ್‌ `ವಚನಗಳು ಶಿಕ್ಷಣದ ಇನ್ನೊಂದು ಪರಿಭಾಷೆ’ ವಿಷಯದ ಬಗ್ಗೆ ಮಾತನಾಡುವರು. 

ಕದಳಿ ಮಹಿಳಾ ವೇದಿಕೆ ರಾಜ್ಯ ಉಪಸಂಚಾಲಕರಾದ ಪ್ರಮೀಳಾ ನಟರಾಜ್‌, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ
ಕೆ.ಬಿ. ಪರಮೇಶ್ವರಪ್ಪ, ಯಶಾ ದಿನೇಶ್‌, ಗಾಯತ್ರಿ ವಸ್ತ್ರದ್‌ ಉಪಸ್ಥಿತರಿರುವರು.

error: Content is protected !!