ಹೊನ್ನಾಳಿ : ಶಿಕ್ಷಣ ಸಂಸ್ಥೆಯ ಉನ್ನತಿಗೆ ಕೌಶಲ್ಯಯುತ ಬೋಧನೆ ಮುಖ್ಯ

ಹೊನ್ನಾಳಿ : ಶಿಕ್ಷಣ ಸಂಸ್ಥೆಯ ಉನ್ನತಿಗೆ ಕೌಶಲ್ಯಯುತ ಬೋಧನೆ ಮುಖ್ಯ

ಹೊನ್ನಾಳಿ, ಫೆ.23- ಖಾಸಗಿ ಶಿಕ್ಷಣ ಸಂಸ್ಥೆಯ ಉನ್ನತಿಗೆ ಶಾಲಾ ಶಿಕ್ಷಕರ ಕೌಶಲ್ಯಯುತ ಬೋಧನೆ ಬಹಳ ಮುಖ್ಯ ಎಂದು ಒಕ್ಕೂಟದ ನೂತನ ರಾಜ್ಯಾಧ್ಯಕ್ಷ ಕೆ. ಪುಟ್ಟಪ್ಪ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ನಡೆದ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ಸಭೆಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಒಕ್ಕೂಟದ ವತಿಯಿಂದ ಶಿಕ್ಷಕ ಶಿಕ್ಷಕಿಯರ ಕುಂದು ಕೊರತೆಗೆ ನಮ್ಮ ಅವಧಿಯಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸುಧಾರಣೆ ಕಂಡಿದೆ. ಹಾಗಾಗಿ ಶಿಕ್ಷಕರು ಅದಕ್ಕೆ ಪೂರಕವಾಗಿ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ರಾಜು ಕಡಗಣ್ಣಾರ ಮಾತನಾಡಿ, ಖಾಸಗಿ ಶೈಕ್ಷಣಿಕ ಪ್ರಗತಿಗೆ ಸೇವೆ ಸಲ್ಲಿಸುವ ಶಿಕ್ಷಕರ ಕಾರ್ಯ ಅನನ್ಯವಾಗಿದೆ. ಉತ್ತಮವಾಗಿ ಸೇವೆ ಸಲ್ಲಿಸುವ ಪ್ರಬುದ್ಧ ಶಿಕ್ಷಕರನ್ನು ಗುರುತಿಸಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರೆಂದು ಗೌರವಿಸಬೇಕು ಎಂದರು.

ಈ ವೇಳೆ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ರೇವಣಸಿದ್ದಪ್ಪ, ಉಪಾಧ್ಯಕ್ಷ ಆಂಜನೇಯ, ಕಾರ್ಯದರ್ಶಿ ವರಣಾಚಾರಿ, ಖಜಾಂಚಿ ಯೋಗೇಶ, ನಿರ್ದೇಶಕರಾದ ಸುರೇಶ್‌, ಚಂದನ, ಕತ್ತಿಗೆ ಸುರೇಶ, ಬಾನುಪ್ರಕಾಶ, ಶಿಕ್ಷಕಿ ಆರತಿ, ಇನ್ನಿತರರಿದ್ದರು.

error: Content is protected !!