ಶೋಷಿತರು ಶಿಕ್ಷಣದಿಂದ ಮುಖ್ಯವಾಹಿನಿಗೆ ಬರಬೇಕು

ಶೋಷಿತರು ಶಿಕ್ಷಣದಿಂದ ಮುಖ್ಯವಾಹಿನಿಗೆ ಬರಬೇಕು

ಬಂಗಾರಕ್ಕನಗುಡ್ಡ ಗ್ರಾಮದ ಕಾರ್ಯಕ್ರಮದಲ್ಲಿ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಆಶಯ

ಜಗಳೂರು, ಫೆ.21 – ಶೋಷಿತರು,  ಶ್ರಮಿಕರ   ಮಕ್ಕಳು ಶಿಕ್ಷಣದಿಂದ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ತಾಲ್ಲೂಕಿನ ಬಂಗಾರಕ್ಕನಗುಡ್ಡ ಗ್ರಾಮದ ಗ್ರಾಮ ದೇವತೆ ದೇವೀರಮ್ಮ ದೇವಿಯ ನೂತನ ಕಳಸಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಮೂರು ದಶಕಗಳ ಹಿಂದೆ ನಿರ್ಮಾಣ ಗೊಳ್ಳಬೇಕಿದ್ದ ಗ್ರಾಮದೇವತೆ ದೇವಸ್ಥಾನದ ಕಟ್ಟಡ ನಿರ್ಮಾಣ ಇಂದು ಪೂರ್ಣಗೊಂಡಿದ್ದು. ದೇವಿಯ ಭಕ್ತಿಗೆ ಪಾತ್ರರಾಗಿರುವುದು ಸಂತಸದ ಸಂಗತಿ. ಗ್ರಾಮದಲ್ಲಿ ಸೋಲಾರ್ ಲೈಟ್ ನಿರ್ಮಾಣಕ್ಕೆ ಎಸ್ ಸಿಪಿ ಮತ್ತು ಟಿಎಸ್ ಪಿ ಅನುದಾನದಡಿ  5ಲಕ್ಷ, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯಕ್ಕೆ  30 ಲಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯ ಶೌಚಾಲಯ ನಿರ್ಮಾಣಕ್ಕೆ 4.50 ಲಕ್ಷ ರೂ. ಅನುದಾನ ಒದಗಿಸಲಾಗುತ್ತಿದ್ದು, ಗ್ರಾಮಸ್ಥರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿ.ಪಂ. ಮಾಜಿ ಸದಸ್ಯ ಕೆ.ಪಿ.ಪಾಲಯ್ಯ ಮಾತನಾಡಿ, ಗ್ರಾಮದಲ್ಲಿ ಅತಿ ಹೆಚ್ಚು ಕೂಲಿಕಾರ್ಮಿಕರು ಬಡತನದಿಂದ ಜೀವನ ಸಾಗಿಸುತ್ತಿದ್ದು, ಅಂಬೇಡ್ಕರ್ ಆಶಯದಂತೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಿ. ಬಸವರಾಜ್‌, ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ. ಮಹೇಶ್ವರಪ್ಪ, ದೊಣ್ಣೆಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ. ತಿಪ್ಪೇಸ್ವಾಮಿ, ಸದಸ್ಯರಾದ ಅಚ್ಚಮ್ಮ, ಸಿದ್ಧಲಿಂಗಪ್ಪ, ಗುತ್ತಪ್ಪ, ಮುಖಂಡರಾದ ಜಯರಾಮಪ್ಪ, ಬಸವ ರಾಜ, ಶಿವಣ್ಣ, ಮಂಜುನಾಥ, ರುದ್ರೇಶ್  ಇದ್ದರು.

error: Content is protected !!