ಕೊಟ್ಟೂರು ತಾಲ್ಲೂಕಿನ ಆದಿ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಇಂದು ನಡೆಯಲಿದ್ದು, ನಾಡಿನ ನಾನಾ ಕಡೆಯಿಂದ ಲಕ್ಷ ಲಕ್ಷ ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸಿ, ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಇಂದು ಸಂಜೆ 5 ಗಂಟೆಯಿಂದ ಕೆ. ಅಯ್ಯನಹಳ್ಳಿ ಗ್ರಾಮದಿಂದ ಕೊಟ್ಟೂರಿಗೆ ಪಾದಯಾತ್ರೆಯ ಮಾಡುವ ಮೂಲಕ ಭಕ್ತಿಯನ್ನು ಸಲ್ಲಿಸಲಿದ್ದಾರೆ. ಅವರ ಜೊತೆಗೆ ತಹಶೀಲ್ದಾರ್ ಜಿ.ಕೆ. ಅಮರೇಶ, ಮುಖ್ಯಾಧಿಕಾರಿ ನಸರುಲ್ಲಾ, ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಭಾಗವಹಿಸಲಿದ್ದಾರೆ.
ಕೊಟ್ಟೂರು ಪಾದಯಾತ್ರೆ ನಡೆಸಿದ ವಿಜಯನಗರ ಜಿಲ್ಲಾಧಿಕಾರಿ ದಿವಾಕರ್
