ಹರಿಹರ ತಾಲ್ಲೂಕು ಅಹಿಂದ ಹಾಗೂ ಶೋಷಿತ ಸಮುದಾಯಗಳ ವೇದಿಕೆಯಿಂದ ಇಂದು ಬೆಳಿಗ್ಗೆ 11ಕ್ಕೆ ಎಂಕೆಇಟಿ, ಸಿಬಿಎಸ್‍ಸಿ ಶಾಲೆ ಪಕ್ಕದ ಯಶಸ್ವಿನಿ ಕನ್‍ವೆನ್ಷನಲ್ ಹಾಲ್‍ನಲ್ಲಿ ಕಾಂತರಾಜು ಆಯೋಗದ ವರದಿ ಬಿಡುಗಡೆಗೆ ಹಾಗೂ ಅನುಷ್ಠಾನಕ್ಕೆ ಆಗ್ರಹಿಸಿ ನಡೆಸಬೇಕಾದ ಹೋರಾಟದ ಪೂರ್ವಭಾವಿ ಸಭೆ ಆಯೋಜಿಸಿದೆ. ತಾಲ್ಲೂಕಿನ ಹಿಂದುಳಿದ ಸಮುದಾಯಗಳ ಸಮಾಜ, ಸಂಘ, ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮಹತ್ವದ ಈ ಸಭೆಯಲ್ಲಿ ಭಾಗವಹಿಸುವಂತೆ ಎಚ್.ನಿಜಗುಣ (9844413151), ಎಚ್.ಕೆ. ಕೊಟ್ರಪ್ಪ (9900910101) ತಿಳಿಸಿದ್ದಾರೆ.
February 23, 2025