ಹರಪನಹಳ್ಳಿ, ಫೆ.20- ತಾಲ್ಲೂಕಿನ ಅನಂತನಹಳ್ಳಿ ಸಮೀಪದ ಸರ್ಕಾರಿ ಆದರ್ಶ ವಿದ್ಯಾಲಯದ 2025-26ನೇ ಸಾಲಿನ 6ನೇ ತರಗತಿ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ತಾಲ್ಲೂಕಿನ ನಿವಾಸಿಗಳು www.schooleducation.kar.nic.in ಅಥವಾ www.vidyavahini.karnataka.gov.in ಇಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಇದೇ ದಿನಾಂಕ 28 ಕೊನೆಯ ದಿನವಾಗಿದೆ. ಮಾರ್ಚ್ 23ರಂದು ಪರೀಕ್ಷೆ ನಡೆಯಲಿವೆ. ವಿವರಕ್ಕೆ ಸಂಪರ್ಕಿಸಿ : 9880955078, 7975534725, 9845977050.