ರಾಣೇಬೆನ್ನೂರು, ಫೆ. 20- ರಾಜ್ಯ ದೇವಾಂಗ ಸಂಘದ ನೂತನ ನಿರ್ದೇಶಕರಾಗಿ ರಾಣೇಬೆನ್ನೂರಿನ ಗೌರಿಶಂಕರ ನಗರದ ನಿವಾಸಿ ಸಂಕಪ್ಪ ಮಾರನಾಳ ಅವರನ್ನು ಆಯ್ಕೆ ಮಾಡಲಾಗಿದೆ. ಹಾವೇರಿ ಬನಶಂಕರಿ ದೇವಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜ್ಯ ದೇವಾಂಗ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ರಾಜೇಶ್ ಆದೇಶ ಪತ್ರ ವಿತರಿಸಿದರು. ಸಹ ಕಾರ್ಯದರ್ಶಿ ಲಕ್ಷ್ಮೀಕಾಂತ ಹುಲಗೂರ, ಉಪಾಧ್ಯಕ್ಷ ವಿರೂಪಾಕ್ಷಪ್ಪ ಗೂಳಿ, ಅಶೋಕ ಹೊನ್ನಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಮೈಲಾರ, ಸಂಘದ ಸದಸ್ಯರಾದ ಗಣೇಶ ಹಾವನೂರ, ವಸಂತ ಕುಂಚೂರ ಸೇರಿದಂತೆ ಇತರರಿದ್ದರು.
ರಾಜ್ಯ ದೇವಾಂಗ ಸಂಘದ ನಿರ್ದೇಶಕರಾಗಿ ಸಂಕಪ್ಪ ಮಾರನಾಳ
