ದಾವಣಗೆರೆ, ಫೆ. 20- ಜಿಲ್ಲಾ ಮಡಿಕಟ್ಟೆ (ದೋಬಿ ಘಾಟ್)ಯ ಒಂದೂವರೆ ಕೋಟಿ ರೂ. ವೆಚ್ಚದ ಆಧುನಿಕ ವಿದ್ಯುತ್ ವಾಷಿಂಗ್ ಯಂತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಕೆ. ಚಮನ್ ಸಾಬ್, ಜಿಲ್ಲಾಧಿಕಾರಿ ಡಾ. ಗಂಗಾಧರ ಸ್ವಾಮಿ, ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಪಾಲಿಕೆ ಸದಸ್ಯರುಗಳು, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಎಂ. ನಾಗೇಂದ್ರಪ್ಪ, ಮಡಿವಾಳ ಹಾಸ್ಟೆಲ್ ಅಧ್ಯಕ್ಷ ನಾಗರಾಜ್, ಜಿಲ್ಲಾ ಮಡಿಕಟ್ಟೆ (ದೋಬಿ ಘಾಟ್) ಅಧ್ಯಕ್ಷ ಕಿಶೋರ್ ಕುಮಾರ್, ಗುತ್ಯಪ್ಪ, ಹನುಮಂತಪ್ಪ, ಶಿವಮೂರ್ತಪ್ಪ, ರವಿ, ಮಂಜಣ್ಣ, ಕೋಟೆಪ್ಪ, ರಮೇಶ್, ಫಕ್ಕೀರಪ್ಪ, ಸಿದ್ದೇಶ್, ಮಡಿವಾಳಪ್ಪ, ಹನುಮಂತಪ್ಪ, ಮಂಜುನಾಥ್, ಚೇತನ್, ವಿನಯ್ ಮತ್ತು ಇತರರು ಉಪಸ್ಥಿತರಿದ್ದರು.