ದಾವಣಗೆರೆ, ಫೆ.20- ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಮಹಾ ಶಿವರಾತ್ರಿ ಪ್ರಯುಕ್ತ ರಾಜ್ಯ ಮಟ್ಟದ ಉಚಿತ `ಅಂಚೆ ಕುಂಚ’ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
50 ಪೈಸೆ ಅಂಚೆ ಕಾರ್ಡಿನಲ್ಲಿ ಈಶ್ವರನ ಚಿತ್ರ ಬರೆಯುವುದು ಸ್ಪರ್ಧೆಯ ವಿಷಯವಾಗಿದ್ದು, ಇದೇ ದಿನಾಂಕ 25ರೊಳಗಾಗಿ ಕಚೇರಿಯ ವಿಳಾಸಕ್ಕೆ ಚಿತ್ರ ಕಳಿಸಬಹುದಾಗಿದೆ. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ `ಕನ್ನಡ ಕೃಪಾ’ ಕುವೆಂಪು ರಸ್ತೆ, ಕೆ.ಬಿ.ಬಡಾವಣೆ, ದಾವಣಗೆರೆ-577002
ಸ್ಪರ್ಧಿಗಳು ಕನ್ನಡದಲ್ಲಿ ವಿಳಾಸ, ವಯಸ್ಸು, ವ್ಯಾಟ್ಸಾಪ್ ಸಂಖ್ಯೆಯನ್ನು ಕಳಿಸಬೇಕು. ಆಂಗ್ಲ ಭಾಷೆಯಲ್ಲಿ ವಿಳಾಸವಿದ್ದರೆ ಸ್ವೀಕರಿಸುವುದಿಲ್ಲ. ವಿವರಕ್ಕೆ ಸಂಪರ್ಕಿಸಿ : 9538732777.