ದಾವಣಗೆರೆ, ಫೆ.20- ಸ್ಯಾಂಡಲ್‌ವುಡ್ ನಟ, ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಕೆ. ಮಂಜು ಅವರ ಕಾರು ಅಪಘಾತ ಕ್ಕೀಡಾಗಿದೆ. ವಿಷ್ಣುಪ್ರಿಯ ಚಲನ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿ ನಿಂದ ದಾವಣಗೆರೆಗೆ ಬರುತ್ತಿದ್ದರು. ಆಗ ಕಾರು ಮತ್ತು ಲಾರಿ ಮಧ್ಯೆ ಗುರುವಾರ ಬೆಳಿಗ್ಗೆ 10ರ ವೇಳೆಗ ಅಪಘಾತ ಸಂಭವಿಸಿದೆ. ಕಾರಿನ ಮುಂದಿನ ಎಡ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಶ್ರೇಯಸ್ ಸೇರಿದಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಸಿನಿಮಾ ಪ್ರಚಾರ ರದ್ದುಪಡಿಸಿ ವಾಪಸ್ ಬೆಂಗಳೂರಿಗೆ ತೆರಳಿದ್ದಾರೆ.
ನಟ ಶ್ರೇಯಸ್ ಮಂಜು ಕಾರು ಅಪಘಾತ
