ಪಿಂಚಣಿ : ಜೀವಿತ ಪ್ರಮಾಣ ಪತ್ರ ಸಲ್ಲಿಕೆ

ದಾವಣಗೆರೆ, ಫೆ.18- ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಪಿಂಚಣಿ ಯೋಜನೆಯಡಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಪಿಂಚಣಿದಾರರು ಪಿಂಚಣಿ ಪಡೆಯುತ್ತಿದ್ದು, ಇದರಲ್ಲಿ 5577 ಪಿಂಚಣಿದಾರರು ಇದುವರೆಗೆ ತಮ್ಮ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಿರುವುದಿಲ್ಲ. ಪಿಂಚಣಿದಾರರು ಜೀವಿತ ಪ್ರಮಾಣ ಪತ್ರವನ್ನು ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕ್‍ನಲ್ಲಿ ಸಲ್ಲಿಸಬಹುದು. ಅಥವಾ ತಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್ ಮೂಲಕ ಫೇಸ್ ಅಂಥೆಂಟಿಕೇಶನ್ ಟೆಕ್ನಾಲಜಿಯನ್ನು ಅಳವಡಿಸಿಕೊಂಡು ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಬಹುದೆಂದು ಕ್ಷೇತ್ರಿಯ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

error: Content is protected !!