ಭೋಳಚಟ್ಟಿ ಚೌಡೇಶ್ವರಿ ದೇವಿ ಹಾಗೂ ಕಾಲಭೈರವ ಭೂತಪ್ಪ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯಿಂದ ಇಂದು ಬೆಳಿಗ್ಗೆ 7.30ಕ್ಕೆ ವೀರಶೈವ ರುದ್ರಭೂಮಿ ಮುಂಭಾಗದ ಚೌಡೇಶ್ವರಿ ದೇವಿ ಮತ್ತು ಕಾಲಭೈರವ ಭೂತಪ್ಪ ಸ್ವಾಮಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ.
ಐರಣಿ ಹೊಳೆಮಠದ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಆವರಗೊಳ್ಳ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ನಿಚ್ಚವ್ವನಹಳ್ಳಿ ಬೃಹನ್ಮಠದ ಶಿವಯೋಗಿ ಹಾಲಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಕೆ. ಸಂತೋಷ್ ಗೌಡ್ರು ತಿಳಿಸಿದ್ದಾರೆ.