ದಾವಣಗೆರೆ, ಫೆ.14- ನಗರದ ಶ್ರೀ ಅಕ್ಕಮಹಾದೇವಿ ಸಮಾಜದ ವತಿಯಿಂದ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ವಧು-ವರರ ಅನ್ವೇಷಣಾ ಸಮಾವೇಶವು ಇತ್ತೀಚೆಗೆ ಪಿಜೆ ಬಡಾವಣೆಯಲ್ಲಿರುವ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿತು.
ಸಮಾವೇಶದ ಅಧ್ಯಕ್ಷತೆಯನ್ನು ಶ್ರೀಮತಿ ಕಂಚಿಕೆರೆ ಸುಶೀಲಮ್ಮ, ಮುಖ್ಯ ಅತಿಥಿಗಳಾಗಿ ಶ್ರೀಮತಿ ಡಾ.ಶಾಂತಾ ಭಟ್, ಕಾರ್ಯದರ್ಶಿಗಳಾದ ಶ್ರೀಮತಿ ದೊಗ್ಗಳ್ಳಿ ಸುವರ್ಣಮ್ಮ, ಉಪಾಧ್ಯಕ್ಷರಾದ ನೀಲಗುಂದ ಜಯಮ್ಮ, ಶಾಂತ ಯಾವಗಲ್, ರತ್ನಮ್ಮ ಮಾಗಾನಹಳ್ಳಿ, ಜಯದೇವಮ್ಮ ಅವರುಗಳು ಉಪಸ್ಥಿತರಿದ್ದರು.