ದಾವಣಗೆರೆ, ಫೆ.13- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್.ಜಿ. ಉಳುವಯ್ಯ ಅವರ ನಿವಾಸ ದಲ್ಲಿ ಇಂದು ನಡೆದ ಶ್ರೀ ಉಳವಿ ಚೆನ್ನಬಸವೇಶ್ವರ ರಥೋತ್ಸವ ಪೂಜಾ ಕಾರ್ಯ ಕ್ರಮದ ಸಂದರ್ಭದಲ್ಲಿ ಮಹಾಸಭಾದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ, ಜಿಲ್ಲಾಧ್ಯಕ್ಷ ಐಗೂರು ಸಿ. ಚಂದ್ರಶೇಖರ್, ಪದಾಧಿಕಾರಿಗಳಾದ ನಿರ್ಮಲಾ ಸುಭಾಷ್, ಯಶೋಧ ಪ್ರಕಾಶ್, ಮಂಜುಳಾ ಈಶ್ವರಪ್ಪ, ದ್ರಾಕ್ಷಾಯಣಮ್ಮ, ಶಿವಕುಮಾರ್ ಕೊರಟಿಗೆರೆ, ಅವಿನಾಶ್ ಬಸವರಾಜ್, ಪ್ರಶಾಂತ್, ಮಾಗಾನಹಳ್ಳಿ ಗಿರೀಶ್, ಸಿದ್ದಲಿಂಗ ಸ್ವಾಮಿ, ಶಿವಕುಮಾರ್, ನಿಧಿ ಐನಳ್ಳಿ, ನವೀನ ಕಾಯಿ, ಶಂಭು ಉರೇಕೊಂಡಿ, ಮುಖಂಡರಾದ ಪ್ರೊ. ವೈ. ವೃಷಭೇಂದ್ರಪ್ಪ, ಎನ್.ಜಿ ಪುಟ್ಟಸ್ವಾಮಿ, ಹಿರೇಮಠ್ ಮುಂತಾದವರು ಉಪಸ್ಥಿತರಿದ್ದರು.
ವೀರಶೈವ ಸಭಾದ ಪದಾಧಿಕಾರಿಗಳಿಗೆ ಗೌರವ
