ಹರಿಹರ, ಫೆ.14- ನಗರದಲ್ಲಿ ಬರುವ ಮಾರ್ಚ್ 18 ರಿಂದ 22 ರವರೆಗೆ ನಡೆಯುವ ಗ್ರಾಮದೇವತೆ ಊರಮ್ಮ ದೇವಿ ಹಬ್ಬದ ಅಂಗವಾಗಿ ದೇವಸ್ಥಾನ ರಸ್ತೆಯಲ್ಲಿ ಹಂದರಗಂಬ ಪೂಜೆಯನ್ನು ಇಂದು ನೆರವೇರಿಸಲಾಯಿತು.
ಬೆಳಗ್ಗೆ ನಾರಾಯಣ ಜೋಯಿಸ್ ಮತ್ತು ಹರಿಶಂಕರ ಜೋಯಿಸರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.
ನಂತರ ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಚನ್ನಬಸಪ್ಪ ಗೌಡ್ರು, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಗುತ್ತೂರು ಜಂಬಣ್ಣ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್, ಕಸಬಾ ಬಣಕಾರ ಸಿದ್ದಪ್ಪ, ಮಾಜೇನಹಳ್ಳಿ ಬಣಕಾರ ಆಂಜನೇಯ, ಉತ್ಸವ ಸಮಿತಿಯ ಅಧ್ಯಕ್ಷ ಹಾರ್ನಳ್ಳಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಖಜಾಂಚಿ ಕೆಂಚಪ್ಪ ದೊಡ್ಡಮನೆ, ಸಹ ಕಾರ್ಯದರ್ಶಿ ಸಿದ್ದಪ್ಪ, ನಗರಸಭೆಯ ಸದಸ್ಯರಾದ ಶಂಕರ್ ಖಟಾವ್ಕರ್, ಕೆ.ಜಿ. ಸಿದ್ದೇಶ್, ಎಸ್.ಎಂ. ವಸಂತ್, ರಜನಿಕಾಂತ್, ನಾಮನಿರ್ದೇಶನ ಸದಸ್ಯ ಕೆ.ಬಿ. ರಾಜಶೇಖರ್, ಕುರುಬ ಸಮಾಜದ ಮಾಜಿ ಅಧ್ಯಕ್ಷ ಕೆ. ಜಡಿಯಪ್ಪ, ಮುಖಂಡರಾದ ವೈ.ಎನ್.ಮಹೇಶ್, ಅಣ್ಣಪ್ಪ ಪೈಲ್ವಾನ್, ಎಂ. ಚಿದಾನಂದ ಕಂಚಿಕೇರಿ, ಜಿ.ನಂಜಪ್ಪ, ಗೌಡ್ರು ಪುಟ್ಟಪ್ಪ, ಬೆಣ್ಣೆ ರೇವಣಸಿದ್ದಪ್ಪ, ಹೆಚ್ ನಿಜಗುಣ, ಸುರೇಶ್ ಚಂದಪೂರ್, ಅಡಕಿ ಕುಮಾರ್, ರೇವಣ್ಣಪ್ಪ ದ್ಯಾವನೇಕರ್, ಚೂರಿ ಜಗದೀಶ್, ಶೇಖರಗೌಡ ಪಾಟೀಲ್, ವಕೀಲ ನಾಗರಾಜ್ ಹಲವಾಗಲು ಇತರರು ಹಾಗೂ ಹಂದರಕಂಬಕ್ಕೆ ಹಾಲು ಹಾಕುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಸವರಾಜಪ್ಪ ನಲ್ಲಿ, ಶ್ರೀನಿವಾಸ್ ಚಂದಾಪೂರ್, ಸತ್ಯನಾರಾಯಣ, ಸಿದ್ದೇಶ್ ಮಿಠಾಯಿ, ಅಮರಾವತಿ ನಾಗರಾಜ್, ತುಳಜಪ್ಪ ಭೂತೆ, ಶ್ರೀಕಾಂತ್ ಮೆಹರ್ವಾಡೆ, ರಮೇಶ್ ಮಾನೆ, ಸಂತೋಷ ನೋಟದರ್, ಪಂಚಾಕ್ಷರಿ, ರವಿಶಂಕರ್ ಗದ್ದಿಗೆಮಠ್ ಮಂಜು ನಾಥ್ ಪೂಜಾರ್, ಆನಂದ್, ರಾಘವೇಂದ್ರ, ಮನೋಹರ, ಬೀರೇಶ್, ನಾರಾಯಣ, ಕನ್ನಪ್ಪ, ಪಾರ್ವತಮ್ಮ, ಅರ್ಚಕರಾದ ಈರಣ್ಣ, ನಾಗ ರಾಜ್, ಜನಾರ್ಧನ್, ಗಣೇಶ ಇತರರಿದ್ದರು.