ದಾವಣಗೆರೆ, ಫೆ.12- ತಾಲ್ಲೂಕಿನ ಹಳೇಕುಂದುವಾಡ ಗ್ರಾಮದ ಆಂಜನೇಯ ಸ್ವಾಮಿ ಹಾಗೂ ಬಸವೇಶ್ವರ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮವು ನಾಳೆ ದಿನಾಂಕ 13ರಿಂದ 17ರ ವರೆಗೆ ನಡೆಯಲಿದೆ ಎಂದು ಬಸವ ಆಂಜನೇಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಜಿ. ಗಣೇಶಪ್ಪ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 13ರಿಂದ 16ರ ವರೆಗೆ ಒಟ್ಟು 4 ದಿನಗಳ ಕಾಲ ಪ್ರತಿ ದಿನ ದೇವರಿಗೆ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.
ದಿನಾಂಕ 17ರ ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕನಕ ಗುರು ಪೀಠದ ನಿರಂಜನಾನಂದಪುರಿ ಶ್ರೀಗಳು, ಹೊಸದುರ್ಗ ಕನಕ ಗುರುಪೀಠ ಶಾಖಾ ಮಠದ ಈಶ್ವರಾನಂದ ಶ್ರೀಗಳು, ಮುರುಘರಾಜೇಂದ್ರ ಮಠದ ಬಸವ ಪ್ರಭು ಶ್ರೀ, ಚಂದ್ರಗಿರಿ ಮಠದ ಮುರುಳೀಧರ ಶ್ರೀ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಶ್ರೀ, ಆವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಶ್ರೀ ಮತ್ತು ಚಲವಾದಿ ಗುರುಪೀಠದ ಬಸವ ನಾಗಿದೇವ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸುವರು. ಧಾರ್ಮಿಕ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದು, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದೆ
ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಎಸ್.ಎ. ರವೀಂದ್ರನಾಥ ಸೇರಿದಂತೆ, ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಹೆಚ್.ಜಿ.ಮಂಜಪ್ಪ, ಮಾಜಿ ಮೇಯರ್ ಹೆಚ್.ಎನ್ ಗುರುನಾಥ್, ಎಪಿಎಂಸಿ ಮಾಜಿ ನಿರ್ದೇಶಕ ಜೆ. ಮಾರುತಿ, ಹಿರಿಯ ಮುಖಂಡ ಹೆಚ್.ಬಿ. ಅಣ್ಣಪ್ಪ, ಹೆಚ್.ಜಿ ದೊಡ್ಡೆಪ್ಪ, ಗೌಡ್ರು ಬಸವರಾಜಪ್ಪ, ಸಿದ್ದನಗೌಡ್ರು, ಬಾರಿಕರ ಚಂದ್ರಪ್ಪ, ಯು.ವಿ ಶ್ರೀನಿವಾಸ್, ಡಿ.ಎಸ್.ಎಸ್ ಮಂಜುನಾಥ್, ಹೆಚ್.ಎಸ್. ಶ್ರೀನಿವಾಸ್, ಜಿ.ಹೆಚ್. ಗಣೇಶ್, ಎಸ್.ಬಿ. ವಿಜಯ್, ತಡಿಕೆಪ್ಪರ್ ನಿಂಗಪ್ಪ, ಹೆಚ್.ಎಸ್. ಉಮಾಪತಿ, ಮಧು ನಾಗರಾಜ್ ಹಾಗೂ ಇತರರು ಇದ್ದರು.