`ಶಿವರಾತ್ರಿ ಉತ್ಸವ’ ಪ್ರತಿಭೆಗಳ ಕಲಾ ಪ್ರದರ್ಶನಕ್ಕೆ ಅವಕಾಶ

ದಾವಣಗೆೇೆರೆ,ಫೆ.12- ನಗರದ ವಿನಾಯಕ ಎಜುಕೇಷನ್ ಟ್ರಸ್ಟ್, ಅಥಣಿ ಹಾಗೂ  ಎಸ್‌ಬಿಸಿ  ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು `ಚಿರಂತನ’ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 26 ರಂದು ಸಂಜೆ 7 ರಿಂದ 11.30 ರ ವರೆಗೆ ಅಥಣಿ ಕಾಲೇಜಿನ ಆವರಣದಲ್ಲಿ ‘ಶಿವರಾತ್ರಿ ಉತ್ಸವ’ ದಲ್ಲಿ ನಗರದ ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ  ಕಲ್ಪಿಸಲಾಗಿದೆ.

 3 ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರು ತಮ್ಮ ಸಂಗೀತ, ನೃತ್ಯ ಪ್ರತಿಭೆ ಪ್ರದರ್ಶಿಸಬಹುದು. ಹೆಸರು ನೋಂದಾಯಿಸಲು ಇದೇ ದಿನಾಂಕ 20 ಕೊನೆಯ ದಿನವಾಗಿದೆ.

  ಈ ಉತ್ಸವದಲ್ಲಿ ಭಾಗವಹಿಸುವವರು  ಮೊದಲು ತಮ್ಮ ಕಲಾ ಪ್ರದರ್ಶನದ 2-3 ನಿಮಿಷದ ವಿಡಿಯೋವನ್ನು ಚಿರಂತನದ ವಾಟ್ಸಾಪ್ ನಂಬರ್ 9535656163 ಗೆ ಕಳುಹಿಸಬೇಕು. ತೀರ್ಪುಗಾರರು ಆಯ್ಕೆ ಮಾಡುವ ಕಲಾವಿದರು, ಕಲಾ ತಂಡಕ್ಕೆ ಮಾತ್ರ ಅಂದು  ಅವಕಾಶ ನೀಡಲಾಗುವುದು.  

error: Content is protected !!